ADVERTISEMENT

Gujarat Election Results: ಐಸಿಹಾಸಿಕ ವಿಜಯದತ್ತ ಬಿಜೆಪಿ ದಾಪುಗಾಲು

ಪಿಟಿಐ
Published 8 ಡಿಸೆಂಬರ್ 2022, 6:44 IST
Last Updated 8 ಡಿಸೆಂಬರ್ 2022, 6:44 IST
ಬಿಜೆಪಿ ಬೆಂಬಲಿಗರ ಸಂಭ್ರಮ
ಬಿಜೆಪಿ ಬೆಂಬಲಿಗರ ಸಂಭ್ರಮ   

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬಿಜೆಪಿ ಐತಿಹಾಸಿಕ ವಿಜಯದತ್ತ ದಾಪುಗಾಲನ್ನಿಟ್ಟಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಈ ಮೂಲಕ ಗುಜರಾತ್ ಚುನಾವಣಾ ಇತಿಹಾಸದಲ್ಲೇ ಬಿಜೆಪಿ ಸಾರ್ವಕಾಲಿಕ ದಾಖಲೆ ಬರೆಯಲಿದ್ದು, ತನ್ನದೇ ಸಂಖ್ಯಾಬಲವನ್ನು ಮೀರಿಸಲಿದೆ.

ADVERTISEMENT

2002ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳನ್ನು ಗೆದ್ದಿರುವುದು ಈವರೆಗಿನ ಸರ್ವಶ್ರೇಷ್ಠ ಸಾಧನೆಯಾಗಿದೆ.

ಅಷ್ಟೇ ಅಲ್ಲದೆ 1985ರಲ್ಲಿ ಕಾಂಗ್ರೆಸ್‌ನ ಮಾಧವಸಿನ್ಹಸೋಲಂಕಿ ಸರ್ಕಾರದ ಸಂಖ್ಯಾಬಲವನ್ನು ಬಿಜೆಪಿ ಹಿಮ್ಮೆಟ್ಟಿಸಲಿದೆ. ಅಂದು ಕಾಂಗ್ರೆಸ್ ಸರ್ಕಾರವು 149 ಸ್ಥಾನಗಳನ್ನು ಗೆದ್ದಿತ್ತು.

2017ಕ್ಕೆ ಹೋಲಿಸಿದರೆ ಉತ್ತಮ ಸಾಧನೆ ಮಾಡಿರುವ ಬಿಜೆಪಿ ಸತತ ಏಳನೇ ಅವಧಿಗೆ ಅಧಿಕಾರ ಹಿಡಿಯುತ್ತಿದೆ. ಈ ಮೂಲಕ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರದ ದಾಖಲೆಯನ್ನು ಸರಿಗಟ್ಟಲಿದೆ. ಪಶ್ಚಿಮ ಬಂಗಾಳದಲ್ಲಿ 1977ರಿಂದ 2011ರ ಅವಧಿಗೆ ಎಡರಂಗದ ಸರ್ಕಾರ ಗದ್ದುಗೆಗೇರಿತ್ತು.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.