ADVERTISEMENT

ಕೋಲ್ಕತ್ತ ಬಂದರು ಪ್ರದೇಶ ಸಮೀಪ ₹198 ಕೋಟಿ ಮೌಲ್ಯದ ಹೆರಾಯಿನ್ ವಶ

ಪಿಟಿಐ
Published 9 ಸೆಪ್ಟೆಂಬರ್ 2022, 14:35 IST
Last Updated 9 ಸೆಪ್ಟೆಂಬರ್ 2022, 14:35 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಅಹಮದಾಬಾದ್: ಪಶ್ಚಿಮ ಬಂಗಾಳ ಕೋಲ್ಕತ್ತ ಬಂದರು ಪ್ರದೇಶ ಸಮೀಪದಲ್ಲಿ ₹ 197.82 ಕೋಟಿ ಮೌಲ್ಯದ39.5 ಕೆಜಿ ಹೆರಾಯಿನ್ ಅನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನ ಜೆಬೆಲ್ ಅಲಿ ಬಂದರಿನ ಮೂಲಕ ಬಂದ ಶಿಪ್ಪಿಂಗ್ ಕಂಟೈನರ್ ಕಳಿಸಲಾಗಿದ್ದ 7,220 ಕಿ.ಗ್ರಾಂಗಳಷ್ಟು ಲೋಹದ ಸ್ಕ್ಯಾಪ್‌ನ ಭಾಗವಾಗಿರುವ 12 ಗಿಯರ್ ಬಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟು ಫೆಬ್ರುವರಿಯಲ್ಲಿ ಕೋಲ್ಕತ್ತ ಬಂದರಿಗೆ ತಲುಪಿಸಲಾಗಿತ್ತು ಎಂದು ಗಾಂಧಿನಗರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್‌ನ ಡಿಜಿಪಿ ಆಶಿಶ್ ಭಾಟಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT