ADVERTISEMENT

ಗುಜರಾತ್ ದೋಣಿ ದುರಂತ: ಕೋಟಿಯಾ ಪ್ರಾಜೆಕ್ಟ್ಸ್‌ ಸಂಸ್ಥೆಯ ಗುತ್ತಿಗೆ ರದ್ದು

ಪಿಟಿಐ
Published 20 ಜನವರಿ 2024, 13:09 IST
Last Updated 20 ಜನವರಿ 2024, 13:09 IST
   

ವಡೋದರಾ: ದೋಣಿ ಮುಳುಗಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹರ್ನಿ ಪ್ರದೇಶದಲ್ಲಿರುವ ಕೆರೆಯಲ್ಲಿ ವಿಹಾರ ಮತ್ತು ಮನರಂಜನೆ ಚಟುವಟಿಕೆಗಳ ನಿರ್ವಹಣೆ ಮಾಡುತ್ತಿದ್ದ ಕೋಟಿಯಾ ಪ್ರಾಜೆಕ್ಟ್ಸ್‌ ಸಂಸ್ಥೆಯ ಗುತ್ತಿಗೆಯನ್ನು ವಡೋದರಾ ನಗರ ಪಾಲಿಕೆ (ವಿಎಂಸಿ) ರದ್ದುಗೊಳಿಸಿದೆ.

ಶಾಲಾ ಮಕ್ಕಳು ಮತ್ತು ಶಿಕ್ಷಕರು ತುಂಬಿದ್ದ ದೋಣಿ ಗುರುವಾರ ಮಧ್ಯಾಹ್ನ ಹರ್ನಿಯ ಮೋಟ್‌ನಾಥ್ ಕೆರೆಯಲ್ಲಿ ಮುಳುಗಿತ್ತು. ದೋಣಿಯಲ್ಲಿ ನಿಗದಿತ ಜನರಿಗಿಂತ ದುಪ್ಪಟ್ಟು ಮಂದಿಯನ್ನು ತುಂಬಲಾಗಿತ್ತು ಮತ್ತು ಪ್ರಯಾಣಿಕರಿಗೆ ಜೀವ ರಕ್ಷಕ ಸಾಧನಗಳನ್ನು ಒದಗಿಸದಿದ್ದುದೇ ಅನಾಹುತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.      

ಕೆರೆ ಪ್ರದೇಶದಲ್ಲಿ ವಿಹಾರ ಮತ್ತು ಮನರಂಜನೆ ಚಟುವಟಿಕೆಗಳ ನಿರ್ವಹಣೆಗಾಗಿ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.