ಗಾಂಧಿನಗರ: ಉತ್ತರ ಗುಜರಾತಿನ ಬನಸ್ಕಾಂತ ಎಂಬಲ್ಲಿ ಸೋಮವಾರಖಾಸಗಿ ಐಷಾರಾಮಿ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದು21 ಮಂದಿ ಸಾವಿಗೀಡಾಗಿದ್ದಾರೆ. 50ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರೀ ಮಳೆಯಿಂದಾಗಿ ರಸ್ತೆಗಳು ಜಾರುತ್ತಿದ್ದು, ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಿದ ಜನರು ಹೇಳಿದ್ದಾರೆ .
70 ಮಂದಿ ಪ್ರಯಾಣಿಕರಿದ್ದ ಆ ಬಸ್ ತ್ರಿಶೂಲಿಯಾ ಘಾಟ್‌ನಲ್ಲಿ ಉರುಳಿ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ರಜಿಯನ್ಹೇಳಿದ್ದಾರೆ.
ಅಹಮದಾಬಾದ್‌ನಿಂದ 160 ಕಿಮೀ ದೂರದಲ್ಲಿರುವ ಅಂಬಾಜಿ - ಡಂತಾ ರಾಷ್ಟ್ರೀಯ ಹೆದ್ದಾರಿಯ ತ್ರಿಶೂಲಿಯಾ ಘಾಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಬನಸ್ಕಾಂತದಲ್ಲಿಸಂಭವಿಸಿದ ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬದೊಂದಿಗೆ ನನ್ನ ಪ್ರಾರ್ಥನೆ ಇದೆ. ಸ್ಥಳೀಯ ಆಡಳಿತ ಗಾಯಾಳುಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು,ಗುಜರಾತಿನ ಬನಸ್ಕಾಂತದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಸಾವಿಗೀಡಾದವರ ಬಗ್ಗೆ ಅತೀವ ದುಃಖವಾಗಿದೆ. ನನ್ನ ಸಂತಾಪಗಳು. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.