ADVERTISEMENT

ಆಡಳಿತ ಮತ್ತು ಸಂಘಟನೆ ವಿಚಾರಗಳಿಗೆ 'ಗುಜರಾತ್' ಬಿಜೆಪಿ ಪ್ರಯೋಗಾಲಯ: ಜೆ.ಪಿ. ನಡ್ಡಾ

ಪಿಟಿಐ
Published 29 ಏಪ್ರಿಲ್ 2022, 12:56 IST
Last Updated 29 ಏಪ್ರಿಲ್ 2022, 12:56 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಗಾಂಧಿನಗರ: ಆಡಳಿತ ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳಿಗೆ ಗುಜರಾತ್ ಪಕ್ಷಕ್ಕೆ ಪ್ರಯೋಗಾಲಯವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಶುಕ್ರವಾರ ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷವು 'ಪ್ರಯೋಗ'ವನ್ನು ಯಶಸ್ವಿಯಾಗಿ ನಡೆಸಿದ್ದು, ಕಳೆದ ವರ್ಷ ವಿಜಯ್ ರೂಪಾನಿ ಸಚಿವ ಸಂಪುಟವನ್ನು ಅನಿರೀಕ್ಷಿತವಾಗಿ ಬದಲಾಯಿಸಿರುವುದು ಕೂಡ ಅಂತಹ ಒಂದು ಪ್ರಯೋಗದ ಭಾಗವಾಗಿದೆ ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ಗುಜರಾತ್ ಆಡಳಿತ ಮತ್ತು ಪಕ್ಷ ಸಂಘಟನೆಗಾಗಿ (ಬಿಜೆಪಿಗೆ) ಪ್ರಯೋಗಾಲಯವಾಗಿದೆ. ನಾವು ಈ ಮಾದರಿಯನ್ನು ದೇಶಾದಾದ್ಯಂತ ಜಾರಿಗೆ ತರುತ್ತೇವೆ. ಪಕ್ಷದ ಮುಖ್ಯಸ್ಥರಾಗಿ, ಈ ಮಾದರಿಯನ್ನು ಮುಂದಕ್ಕೆ ಕೊಂಡೊಯ್ಯುವುದು ನನ್ನ ಜವಾಬ್ದಾರಿಯಾಗಿದೆ' ಎಂದು ನಡ್ಡಾ ಹೇಳಿದರು.

ADVERTISEMENT

ನರೇಂದ್ರ ಮೋದಿ ಅವರು ಬಿಜೆಪಿ ಪದಾಧಿಕಾರಿಯಾಗಿ ಮತ್ತು ನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವದಲ್ಲಿ ಪಕ್ಷವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು 'ಬದಲಾವಣೆಯ ಮಾಧ್ಯಮ'ವನ್ನಾಗಿ ಮಾಡಲು ಯಶಸ್ವಿ ಪ್ರಯೋಗಗಳನ್ನು ಗುಜರಾತ್‌ನಲ್ಲಿ ನಡೆಸಲಾಯಿತು ಎಂದು ಅವರು ಹೇಳಿದರು.

ಕಳೆದ ವರ್ಷ ರಾಜ್ಯದಲ್ಲಿ ರೂಪಾನಿ ಸಂಪುಟಕ್ಕೆ ರಾಜೀನಾಮೆ ನೀಡಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂತು. ಈ ಹಠಾತ್ ಬದಲಾವಣೆ ಕೂಡ ಪಕ್ಷದ ಕಾರ್ಯತಂತ್ರದ ಭಾಗವಾಗಿ ನಡೆಸಿದ 'ಪ್ರಯೋಗ' ಎಂದು ನಡ್ಡಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.