ADVERTISEMENT

70 ವರ್ಷ ಆಹಾರ, ನೀರು ಸೇವಿಸದೆ ಬದುಕಿದ್ದ ಯೋಗಿ ಪ್ರಹ್ಲಾದ್ ಜಾನಿ ದೇಹಾಂತ್ಯ

ಪಿಟಿಐ
Published 26 ಮೇ 2020, 11:33 IST
Last Updated 26 ಮೇ 2020, 11:33 IST
ಪ್ರಹ್ಲಾದ್ ಜಾನಿ (ಸಂಗ್ರಹ ಚಿತ್ರ)
ಪ್ರಹ್ಲಾದ್ ಜಾನಿ (ಸಂಗ್ರಹ ಚಿತ್ರ)   

ಅಹಮದಾಬಾದ್: 70 ವರ್ಷಗಳಿಂದ ನೀರು,ಆಹಾರವಿಲ್ಲದೆ ಬದುಕಿದ್ದ ಪ್ರಹ್ಲಾದ್ ಜಾನಿ ಅಲಿಯಾಸ್ಚುನರೀವಾಲಾಮಾತಾಜಿ ಮಂಗಳವಾರ ಬೆಳಗ್ಗೆ ಗುಜರಾತಿನ ಗಾಂಧೀನಗರ್ ಜಿಲ್ಲೆಯ ಚರದಾ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಶಿಷ್ಯರು ತಿಳಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಪ್ರಹ್ಲಾದ್ ಜಾನಿಯವರಿಗೆ ಗುಜರಾತಿನಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ.ಆಹಾರ ಅಥವಾ ನೀರು ಇಲ್ಲದೆ ಬದುಕುತ್ತಿರುವುದು ಹೇಗೆ ಎಂಬುದರ ಬಗ್ಗೆ 2003 ಮತ್ತು 2010ರಲ್ಲಿ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದರು.ತನಗೆ ದೈವ ಬಲ ಇರುವ ಕಾರಣ ಅನ್ನ ಅಥವಾ ನೀರು ಯಾವುದೂ ಬೇಡ ಎಂದು ಪ್ರಹ್ಲಾದ್ ಜಾನಿ ಹೇಳಿದ್ದರು.

ಇದೀಗಜಾನಿ ಅವರ ಮೃತದೇಹವನ್ನು ಬನಕಾಂತ ಜಿಲ್ಲೆಯಲ್ಲಿರುವ ಅಂಬಾಜಿ ದೇವಾಲಯದ ಬಳಿ ಇರುವ ಆಶ್ರಮಕ್ಕೆ ತೆಗೆದುಕೊಂಡು ಹೋಗಲಾಗಿದೆ .

ADVERTISEMENT

ತನಗೆ ತನ್ನ ಊರು ಚರದಾದಲ್ಲಿ ಕೆಲವು ದಿನಗಳನ್ನು ಕಳೆಯಬೇಕು ಎಂದು ಮಾತಾಜಿ ಹೇಳಿದ್ದರಿಂದ ಅವರನ್ನು ಕೆಲವು ದಿನಗಳ ಹಿಂದೆಯಷ್ಟೇ ಚರದಾ ಗ್ರಾಮಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮಂಗಳವಾರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.ಅಂತಿಮ ದರ್ಶನ ಪಡೆಯುವುದಕ್ಕಾಗಿ ಎರಡು ದಿನಗಳ ಕಾಲ ಮೃತದೇಹವನ್ನು ಆಶ್ರಮದಲ್ಲಿರಿಸಲಾಗುವುದು. ಗುರುವಾರ ಆಶ್ರಮದಲ್ಲಿ ಅವರನ್ನು ಸಮಾಧಿ ಮಾಡಲಾಗುವುದು ಎಂದು ಅವರ ಶಿಷ್ಯರು ಹೇಳಿದ್ದಾರೆ.

ಅಂಬಾ ದೇವಿಯ ಭಕ್ತರಾಗಿರುವ ಮಾತಾಜಿ ಮಹಿಳೆಯಂತೆ ಕೆಂಪು ಸೀರೆ ಉಡುತ್ತಾರೆ. ಹಾಗಾಗಿ ಅವರನ್ನು ಚುನರೀವಾಲಾ ಮಾತಾಜೀ ಎಂದು ಭಕ್ತರು ಕರೆಯುತ್ತಾರೆ.

ಆಹಾರ ಅಥವಾ ನೀರು ಇಲ್ಲದೆ 76 ವರ್ಷ ತಾನು ಬದುಕಿದ್ದೇನೆ ಎಂದು ಜಾನಿ ಹೇಳುತ್ತಿದ್ದರು. ಆಧ್ಯಾತ್ಮಒಲವಿನಿಂದಾಗಿ ಜಾನಿ ಅವರು ಚಿಕ್ಕ ವಯಸ್ಸಿನಲ್ಲೇ ಅವರ ಹೆತ್ತವರ ಮನೆ ತೊರೆದಿದ್ದರು. 14ನೇ ವಯಸ್ಸಿನಲ್ಲಿ ಅವರು ಅನ್ನ ಆಹಾರ ಸೇವಿಸುವುದನ್ನು ಬಿಟ್ಟಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ .

ಅಂಬಾಜಿ ದೇವಾಲಯದ ಬಳಿ ಜಾನಿ ಅವರು ಗುಹೆಯೊಂದನ್ನು ನಿರ್ಮಿಸಿದ್ದರು. ಬರೀ ಗಾಳಿಯನ್ನು ಸೇವಿಸಿ ಅವರು ಬದುಕುತ್ತಿದ್ದಾರೆ ಎಂಬುದು ಅವರನ್ನು ಜನಪ್ರಿಯಗೊಳಿಸಿತ್ತು.

2010ರಲ್ಲಿ ಡಿಫೆನ್ಸ್ ರಿಸರ್ಜ್ ಆ್ಯಂಡ್ ಡೆವೆಲಪ್‌ಮೆಂಟ್ ಆರ್ಗನೈಸೇಷನ್ ನೇತೃತ್ವದಲ್ಲಿಡಿಐಪಿಎಸ್‌ನ ವಿಜ್ಞಾನಿಗಳು ಮತ್ತು ವೈದ್ಯರು 15 ದಿನಗಳ ಕಾಲ ಜಾನಿ ಅವರ ಮೇಲೆನಿಗಾ ಇರಿಸಿಅಧ್ಯಯನ ನಡೆಸಿದ್ದರು. ಜಾನಿ ಅವರ ದೇಹದಲ್ಲಿ ಹಸಿವು ಮತ್ತು ದಾಹ ಆಗದಂತಿರುವ ಕೆಲವು ವ್ಯವಸ್ಥೆ ಇದೆ ಎಂದು ಡಿಐಪಿಎಎಸ್ ತಜ್ಞರುಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.