ರಾಜ್‌ಕೋಟ್: ‘ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಸುಮಾರು 10 ಹೋಟೆಲುಗಳಿಗೆ ಶನಿವಾರ ಬಾಂಬ್ ಬೆದರಿಕೆ ಕರೆಗಳು ಬಂದಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೋಟೆಲುಗಳಿಗೆ ಮಧ್ಯಾಹ್ನ 12.45ರ ಸುಮಾರಿಗೆ ಇಮೇಲ್ ರವಾನೆಯಾಗಿದ್ದು, ಬಾಂಬ್ ಇಟ್ಟಿರುವ ಕುರಿತು ಹೇಳಲಾಗಿದೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡರು. ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಶೇಷ ಕಾರ್ಯಾಚರಣೆ ತಂಡದವರು ಹೋಟೆಲುಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಎಸ್.ಎಂ. ಜಡೇಜ ತಿಳಿಸಿದ್ದಾರೆ.
ಇಮೇಲ್ ಕಳುಹಿಸಿದ ವ್ಯಕ್ತಿಯು ತನ್ನನ್ನು ಕನ್‌ಡೆನ್ ಎಂದು ಕರೆದುಕೊಂಡಿದ್ದಾನೆ. ರಾಜ್‌ಕೋಟ್‌ನ ಹತ್ತು ಹೋಟೆಲುಗಳ ಒಳಗೆ ಎಲ್ಲಾ ಕಡೆ ಬಾಂಬ್ ಇಡಲಾಗಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಅವು ಸ್ಫೋಟಗೊಳ್ಳಲಿವೆ. ಮುಗ್ದ ಜೀವಗಳು ಪ್ರಾಣ ಕಳೆದುಕೊಳ್ಳಲಿವೆ. ತಕ್ಷಣ ಹೋಟೆಲ್ ಖಾಲಿ ಮಾಡಿ ಎಂದು ಇಮೇಲ್‌ನಲ್ಲಿದೆ.
‘ಈ ಹೋಟೆಲುಗಳಲ್ಲಿ ತಪಾಸಣೆ ನಡೆಸಲಾಯಿತು. ಶೋಧ ಕಾರ್ಯವು ಸಂಜೆ 6ಕ್ಕೆ ಕೊನೆಗೊಂಡಿತು. ಯಾವುದೇ ಬಾಂಬ್ ಆಗಲೀ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಜಡೇಜ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.