ADVERTISEMENT

ಗುಲ್ಮಾರ್ಗ್‌: ಉಗ್ರರ ಪತ್ತೆಗೆ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:15 IST
Last Updated 26 ಅಕ್ಟೋಬರ್ 2024, 14:15 IST
.
.   

ಶ್ರೀನಗರ: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಪತ್ತೆಗಾಗಿ, ಉತ್ತರ ಕಾಶ್ಮೀರದ ಗುಲ್ಮಾರ್ಗ್‌ ಮತ್ತು ಬೋಟಾ ಪಥ್ರಿ  ಪ್ರದೇಶಗಳ ಅರಣ್ಯದಲ್ಲಿ ಭದ್ರತಾ ಪಡೆಗಳು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಸೇನಾ ವಾಹನದ ಮೇಲೆ ಗುರುವಾರ ನಡೆದ ದಾಳಿಯಲ್ಲಿ ಮೂವರು ಸೈನಿಕರು ಸೇರಿ ಐವರು ಮೃತಪಟ್ಟಿದ್ದರು.

ದಟ್ಟ ಅರಣ್ಯಗಳಲ್ಲಿ ಉಗ್ರರು ಮತ್ತು ಶಸ್ತ್ರಾಸ್ತ್ರಗಳ ಪತ್ತೆಗಾಗಿ ಅತ್ಯಾಧುನಿಕ ವೈಮಾನಿಕ ಕಣ್ಗಾವಲು ತಂತ್ರಜ್ಞಾನವನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.  ದಾಳಿ ಬಳಿಕ ಭಯೋತ್ಪಾದಕರು ಅರಣ್ಯ ಹೊಕ್ಕಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಲಭ್ಯವಾಗಿರುವ ಸಾಕ್ಷ್ಯಗಳನ್ನು ಗಮನಿಸಿದರೆ 3–4 ಉಗ್ರರು ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ’ ಎಂದು ಬಾರಮುಲ್ಲಾದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್‌ ಜೈದ್‌ ಮಲಿಕ್‌ ತಿಳಿಸಿದ್ದಾರೆ.

ಪೀಪಲ್ಸ್‌ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌ (ಪಿಎಎಫ್‌ಎಫ್‌) ಎಂಬ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಸಂಘಟನೆಯು ಪಾಕಿಸ್ತಾನ ಮೂಲದ ಜೈಶ್‌–ಇ–ಮೊಹಮ್ಮದ್‌ ಗುಂಪಿನ ಭಾಗವೆಂದು  ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.