ADVERTISEMENT

ಗುರು ನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2020, 4:26 IST
Last Updated 30 ನವೆಂಬರ್ 2020, 4:26 IST
ಸಿಖ್‌ ಜಯಂತಿ ಹಿನ್ನೆಲೆಯಲ್ಲಿ ಅಲಂಕೃತಗೊಂಡಿರುವ ಪಂಜಾಬ್‌ನ ಅಮೃತಸರದ ಸ್ವರ್ಣದೇಗುಲ ಭಾನುವಾರ ರಾತ್ರಿ ಹೀಗೆ ಕಾಣಿಸಿತು – ಪಿಟಿಐ ಚಿತ್ರ
ಸಿಖ್‌ ಜಯಂತಿ ಹಿನ್ನೆಲೆಯಲ್ಲಿ ಅಲಂಕೃತಗೊಂಡಿರುವ ಪಂಜಾಬ್‌ನ ಅಮೃತಸರದ ಸ್ವರ್ಣದೇಗುಲ ಭಾನುವಾರ ರಾತ್ರಿ ಹೀಗೆ ಕಾಣಿಸಿತು – ಪಿಟಿಐ ಚಿತ್ರ   

ನವದೆಹಲಿ: ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಶುಭಾಶಯ ಕೋರಿದ್ದಾರೆ. ಗುರು ನಾನಕ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

‘ಏಕತೆ, ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಮತ್ತು ಸೇವೆಯ ಹಾದಿ ತೋರಿಸಿರುವ ಗುರು ನಾನಕರು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸ್ವಾಭಿಮಾನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನೂ ಬೋಧಿಸಿದ್ದರು’ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.

‘ಗುರು ನಾನಕ್ ಜಯಂತಿಯ ಈ ಸಂದರ್ಭದಲ್ಲಿ ದೇಶದ ನಾಗರಿಕರಿಗೆ, ವಿಶೇಷವಾಗಿ ಸಿಖ್ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ, ಅವರ ಬೋಧನೆಗಳ ಅನುಸರಿಸಿಕೊಂಡು ಮುನ್ನಡೆಯಬೇಕು ಎಂದು ನಾವು ನಿರ್ಧರಿಸೋಣ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಗುರು ನಾನಕ್ ದೇವ್‌ ಜೀ ಅವರಿಗೆ ನಮಸ್ಕರಿಸುತ್ತೇನೆ. ಅವರ ಚಿಂತನೆಗಳು ಸಮಾಜದ ಸೇವೆ ಮಾಡಲು ಮತ್ತು ಭೂಮಿಯ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ನಮ್ಮನ್ನು ಪ್ರರೇಪಿಸುತ್ತಿರಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಗುರು ನಾನಕ್ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.