ಗುರುಗ್ರಾಮ: ಜುನೈದ್–ನಾಸಿರ್ ಕೊಲೆ ಪ್ರಕರಣದ ಆರೋಪಿ ಬಜರಂಗ ದಳದ ಕಾರ್ಯಕರ್ತ, ಗೋರಕ್ಷಕ ಮೋನು ಮಾನೇಸರ್ ಅವರನ್ನು ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಪಟೌದಿಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತರನ್ನುಮ್ ಖಾನ್ ಅವರೆದುರು ಮಾನೇಸರ್ ಅವರನ್ನು ಹಾಜರುಪಡಿಸಲಾಗಿತ್ತು.
‘ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಆರೋಪಿಯ ಸಹಚರರಿಂದ ವಶಕ್ಕೆ ಪಡೆಯಲಾಗುವುದು. ಪಾತಕಿಗಳ ಗುಂಪಿನೊಂದಿಗೆ ಮಾನೇಸರ್ ನಂಟು ಹೊಂದಿದ್ದಾರೆಯೇ ಎಂಬ ಆಯಾಮದಲ್ಲೂ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಏಳು ದಿನ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ಗುರುಗ್ರಾಮ ಪೊಲೀಸರು ಮನವಿ ಮಾಡಿದರು. ಆದರೆ ಕೋರ್ಟ್ ನಾಲ್ಕು ದಿನ ಮಾತ್ರ ವಶಕ್ಕೆ ನೀಡಿತು’ ಎಂದು ಮಾನೇಸರ್ ಪರ ವಕೀಲ ವಕೀಲ ಕುಲಭೂಷಣ್ ಭಾರದ್ವಾಜ್ ತಿಳಿಸಿದರು.
ನಾಸಿರ್ ಮತ್ತು ಜುನೈದ್ ಅಪಹರಣ, ಕೊಲೆ ಪ್ರಕರಣದಲ್ಲಿ ಮಾನೇಸರ್ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತರಿಬ್ಬರ ಸುಟ್ಟು ಕರಕಲಾದ ಮೃತದೇಹಗಳು ರಾಜಸ್ಥಾನ–ಹರಿಯಾಣ ಗಡಿಯಲ್ಲಿ ವಾಹನವೊಂದರಲ್ಲಿ ಫೆ.16ರಂದು ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.