ತಿರುವನಂತಪುರ: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಒಂದೇ ದಿನ 232 ಮದುವೆಗಳು ನೆರವೇರಿವೆ.
ಕೋವಿಡ್ ನಂತರದ ದಿನಗಳಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮದುವೆಗಳು ನಡೆದಿವೆ ಎಂದು ದೇಗುಲದ ಅಧಿಕಾರಿಗಳು ಹೇಳಿದ್ದಾರೆ.
248 ಮದುವೆ ಬುಕಿಂಗ್ ಮಾಡಲಾಗಿತ್ತಾದರೂ, ಕೆಲವೊಂದು ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ, 232 ಮದುವೆಗಳು ನೆರವೇರಿವೆ.
2017ರ ಆಗಸ್ಟ್‌ನಲ್ಲಿ ಒಂದೇ ದಿನ 277 ಮದುವೆ ನಡೆದು ಸುದ್ದಿಯಾಗಿತ್ತು, 2018ರಲ್ಲಿ ಒಂದೇ ದಿನದಲ್ಲಿ 264 ಮದುವೆ ನಡೆದಿತ್ತು.
ಅದಾದ ಬಳಿಕ, ಜನಜಂಗುಳಿ ನಿಯಂತ್ರಿಸಲು, ದೇಗುಲದ ನಿರ್ವಹಣಾ ಮಂಡಳಿ, ದಿನವೊಂದಕ್ಕೆ 200 ಮದುವೆಗೆ ಮಾತ್ರ ಅವಕಾಶ ಎಂದು ಹೇಳಿದೆ.
ಅಲ್ಲದೆ, ಐದು ಮಂಟಪಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಮದುವೆಗೆ 20 ಜನರು ಭಾಗವಹಿಸಲು ಅವಕಾಶ ಕಲ್ಪಿಸಿದೆ. ಬೆಳಗ್ಗೆ 5 ಗಂಟೆಗೆ ಮದುವೆ ಶಾಸ್ತ್ರ ಆರಂಭವಾಗಿ, ರಾತ್ರಿ 11 ಗಂಟೆಯವರೆಗೂ ಕಾರ್ಯಕ್ರಮ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.