ADVERTISEMENT

ಜ್ಞಾನವಾಪಿ ಮಸೀದಿಯಿರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ: ವಕೀಲ ವಿಷ್ಣು ಶಂಕರ್ ಜೈನ್

ಪಿಟಿಐ
Published 26 ಜನವರಿ 2024, 19:52 IST
Last Updated 26 ಜನವರಿ 2024, 19:52 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ವಾರಾಣಸಿ: ‘ಜ್ಞಾನವಾಪಿ ಮಸೀದಿಯಿರುವ ಜಾಗದಲ್ಲಿ ಹಲವು ಪ್ರಾಚೀನ ಶಾಸನಗಳು ಪತ್ತೆಯಾಗಿವೆ ಎಂಬ ವಿವರ ಎಎಸ್‌ಐ ವರದಿಯಲ್ಲಿದೆ. ಅವುಗಳಲ್ಲಿ ಕನ್ನಡ, ದೇವನಾಗರಿ ಮತ್ತು ತೆಲುಗು ಶಾಸನಗಳೂ ಇವೆ’ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಅವರ ಹೇಳಿಕೆಯಂತೆ ವರದಿಯಲ್ಲಿರುವ ಕೆಲವು ಅಂಶಗಳು ಇಲ್ಲಿವೆ...

  • ಮೊಘಲ್‌ ದೊರೆ ಔರಂಗಜೇಬನ ಆಡಳಿತದಲ್ಲಿ 17ನೇ ಶತಮಾನದಲ್ಲಿ ದೇವಸ್ಥಾನದ ಒಂದು ಭಾಗ ಕೆಡವಿ ಮಸೀದಿ ನಿರ್ಮಿಸಲಾಗಿದೆ

  • ಮಸೀದಿಯಿರುವ ಜಾಗದಲ್ಲಿ ಒಂದು ಕಡೆ ‘ಮಹಾಮುಕ್ತಿ ಮಂಟಪ’ ಎಂದು ಬರೆದಿರುವುದು ಪತ್ತೆಯಾಗಿದೆ. ಇಲ್ಲಿ ಈ ಹಿಂದೆ ದೇವಾಲಯವಿತ್ತು ಎಂಬುದಕ್ಕೆ ಇದು ಪ್ರಬಲ ಸಾಕ್ಷ್ಯವಾಗಿದೆ

    ADVERTISEMENT
  • ರುದ್ರ, ಜನಾರ್ದನ ಹಾಗೂ ವಿಶ್ವೇಶ್ವರನ ಕುರಿತ ಶಾಸನಗಳು ‍ದೊರೆತಿವೆ

  • ಹಿಂದೆ ಕೆಡವಲಾದ ದೇವಸ್ಥಾನದ ಕಂಬಗಳನ್ನೇ ಬಳಸಿ ಮಸೀದಿ ನಿರ್ಮಾಣ

  • ಮಸೀದಿಯ ಪಶ್ಚಿಮ ಭಾಗದ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು

  • ಮಸೀದಿಯ ತಳಮಹಡಿಯಲ್ಲಿ ಹಿಂದೂ ದೇವರ ವಿಗ್ರಹಗಳ ಅವಶೇಷಗಳು ಪತ್ತೆಯಾಗಿವೆ. ಗೋಡೆಯಲ್ಲಿ ‘ಸ್ವಸ್ತಿಕ್‌’ ಚಿಹ್ನೆ ಕೆತ್ತಿರುವುದು ಕಂಡುಬಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.