ADVERTISEMENT

ಬಿಜೆಪಿ ಜತೆಗಿದ್ದಿದ್ದರೆ ಹೇಮಂತ್‌ ಸೊರೇನ್‌ ಜೈಲು ಸೇರುತ್ತಿರಲಿಲ್ಲ: ಕೇಜ್ರಿವಾಲ್

ಪಿಟಿಐ
Published 18 ಫೆಬ್ರುವರಿ 2024, 15:27 IST
Last Updated 18 ಫೆಬ್ರುವರಿ 2024, 15:27 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಬಿಜೆಪಿ ಜತೆ ಕೈಜೋಡಿಸಿದ್ದರೆ, ಅವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.

ಸೊರೇನ್‌ ಅವರ ಪತ್ನಿ ಕಲ್ಪನಾ ಮುರ್ಮು ಸೊರೇನ್‌ ಅವರೊಂದಿಗೆ ಕೇಜ್ರಿವಾಲ್‌ ದೂರವಾಣಿ ಸಂಭಾಷಣೆ ನಡೆಸಿದರು. ಬಳಿಕ ‘ಎಕ್ಸ್‌’ನಲ್ಲಿ ಅವರು ಈ ಕುರಿತು ಪೋಸ್ಟ್‌ ಮಾಡಿದ್ದಾರೆ. 

‘ಹೇಮಂತ್‌ ಸೊರೇನ್‌ ಅವರ ಪರ ನಾವು ನಿಂತಿದ್ದೇವೆ. ಬಿಜೆಪಿಯ ದೌರ್ಜನ್ಯವನ್ನು ಅವರು ಎದುರಿಸಿದ ಬಗೆಯನ್ನು ಇಡೀ ದೇಶವೇ ನೋಡಿದೆ. ಅಲ್ಲದೆ ಅವರ ಶಕ್ತಿ ಮತ್ತು ಧೈರ್ಯವನ್ನೂ ಶ್ಲಾಘಿಸಿದೆ. ಒಂದು ವೇಳೆ ಅವರು ಬಿಜೆಪಿ ಜತೆಗೆ ಹೋಗಿದ್ದರೆ, ಇಂದು ಜೈಲು ಪಾಲಾಗುತ್ತಿರಲಿಲ್ಲ. ಆದರೆ ಅವರು ಸತ್ಯದ ಮಾರ್ಗ ಬಿಡಲಿಲ್ಲ. ಅವರಿಗೆ ನಮಸ್ಕಾರ’ ಎಂದು ದೆಹಲಿ ಸಿ.ಎಂ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.