ಹಲ್ದವಾನಿ(ಉತ್ತರಾಖಂಡ): ಉತ್ತರಾಖಂಡದ ಹಲ್ದವಾನಿ ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ತೆರವು ಮಾಡುವ ಸಂದರ್ಭ ಹಿಂಸಾಚಾರ ಭುಗಿಲೆದ್ದಿದ್ದು, ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಡಲ್ಲಿ ಗುಂಡು ಆದೇಶ ಸಹ ಜಾರಿ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಸರ್ಕಾರಿ ಜಾಗದಲ್ಲಿ ಕಟ್ಟಲಾಗಿದ್ದ ಮದರಸಾವನ್ನು ಉರುಳಿಸಿದ್ದರಿಂದ ಕೋಪಗೊಂಡ ಸ್ಥಳೀಯ ನಿವಾಸಿಗಳು ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಮೊದಲೇ ನೋಟಿಸ್ ನೀಡಿ ಮದರಸಾ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಎಸ್‌ಎಸ್‌ಪಿ ಪ್ರಲ್ಹಾದ್ ಮೀನಾ ಹೇಳಿದ್ದಾರೆ.
ಸುತ್ತಮುತ್ತಲಿನ ಜನರು ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರ ಮೇಲೆ ಕಲ್ಲು ತೂರಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ್, ಸಿಟಿ ಮ್ಯಾಜಿಸ್ಟ್ರೇಟ್ ರಿಚಾ ಸಿಂಗ್ ಮತ್ತು ಎಸ್‌ಡಿಎಂ ಪರಿತೋಷ್ ವರ್ಮಾ ನೇತೃತ್ವದಲ್ಲಿ ಮದರಸಾ ತೆರವು ಕಾರ್ಯಾಚರಣೆ ನಡೆಯಿತು ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.