ADVERTISEMENT

ದೇಶದ ಅರ್ಧದಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ: ಕೇಂದ್ರ ಆರೋಗ್ಯ ಇಲಾಖೆ ಸಮೀಕ್ಷೆ

ಏಜೆನ್ಸೀಸ್
Published 21 ಮೇ 2021, 3:35 IST
Last Updated 21 ಮೇ 2021, 3:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 50ರಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ 25 ನಗರಗಳಲ್ಲಿ ಸಮೀಕ್ಷೆ ನಡೆಸಿರುವ ಆರೋಗ್ಯ ಇಲಾಖೆಯು, 'ದೇಶದ ಅರ್ಧದಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ. ಶೇ 64ರಷ್ಟು ಜನರು ಕೇವಲ ಬಾಯಿಗೆ ಮಾತ್ರ ಮಾಸ್ಕ್‌ ಅನ್ನು ಹಾಕಿಕೊಳ್ಳುತ್ತಾರೆ. ಶೇ 20ರಷ್ಟು ಜನರು ಕೆನ್ನೆಯ ಮೇಲೆ ಮಾಸ್ಕ್‌ ಧರಿಸುತ್ತಾರೆ. ಶೇ 2ರಷ್ಟು ಜನರ ಕುತ್ತಿಗೆಯ ಮೇಲೆ ಮಾಸ್ಕ್‌ ಇರುತ್ತದೆ' ಎಂದು ಹೇಳಿದೆ.

ಶೇ 14ರಷ್ಟು ಜನರು ಮಾತ್ರ ಮಾಸ್ಕ್‌ ಅನ್ನು ಸರಿಯಾಗಿ ಧರಿಸುತ್ತಾರೆ. ಮೂಗು, ಬಾಯಿ, ಕೆನ್ನೆಗಳ ಮೇಲೆ ಕ್ಲಿಪ್‌ ಹೊಂದಿರುವ ಮಾಸ್ಕ್‌ ಅನ್ನು ಹಾಕಿಕೊಳ್ಳುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಆರೋಗ್ಯ ಇಲಾಖೆಯ ಸಮೀಕ್ಷೆಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ADVERTISEMENT

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌ ಪಾಸಿಟಿವಿಟಿ ದರವು ಶೇ 13.44ರಷ್ಟಿದೆ. ಒಟ್ಟು ಪ್ರಕರಣಗಳಲ್ಲಿ ಶೇಕಡಾ 77.17ರಷ್ಟು ಪ್ರಕರಣಗಳು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಒಡಿಶಾ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಹರಿಯಾಣದಿಂದ ವರದಿಯಾಗಿವೆ.

ದೇಶದ ಎಂಟು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಒಂಬತ್ತು ರಾಜ್ಯಗಳಲ್ಲಿ 50,000 ದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿದ್ದು, 19 ರಾಜ್ಯಗಳಲ್ಲಿ 50,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತದಲ್ಲಿ ಕೋವಿಡ್‌–19 ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಹಾಗೂ ಸಾಕಷ್ಟು ಗಾಳಿ ಇರುವಂತೆ ಗಮನಿಸುವುದರ ಕುರಿತು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.