ADVERTISEMENT

Election Results: ಹರಿಯಾಣದಲ್ಲಿ ಮತ್ತೆ ಬುಡಮೇಲಾದ ಮತಗಟ್ಟೆ ಲೆಕ್ಕಾಚಾರ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2024, 6:30 IST
Last Updated 8 ಅಕ್ಟೋಬರ್ 2024, 6:30 IST
<div class="paragraphs"><p>ಮತಗಟ್ಟೆ ಸಮೀಕ್ಷೆ</p></div>

ಮತಗಟ್ಟೆ ಸಮೀಕ್ಷೆ

   

(ಐಸ್ಟೋಕ್ ಚಿತ್ರ)

ಬೆಂಗಳೂರು: ಚುನಾವಣೆ ಫಲಿತಾಂಶಕ್ಕೆ ದಿಕ್ಸೂಚಿ ಎಂದೇ ಮತಗಟ್ಟೆ ಸಮೀಕ್ಷೆಗಳನ್ನು ಪರಿಗಣಿಸಲಾಗುತ್ತದೆ. ಆದರೆ ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವಂತೆಯೇ, ಚುನಾವಣೋತ್ತರ ಫಲಿತಾಂಶಗಳ ಲೆಕ್ಕಾಚಾರಗಳು ಮತ್ತೆ ಬುಡಮೇಲಾಗುತ್ತಿರುವ ಪರಿಸ್ಥಿತಿ ಕಂಡುಬರುತ್ತಿವೆ.

ADVERTISEMENT

ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿತ್ತು. ಆದರೆ ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಬೆಳಿಗ್ಗೆ 11.45ಕ್ಕೆ) ಪ್ರಕಾರ ಬಿಜೆಪಿ 49 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ.

ಆ ಮೂಲಕ ಬಿಜೆಪಿ ಸತತ ಮೂರನೇ ಬಾರಿ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. 90 ಸದಸ್ಯ ಬಲದ ಹರಿಯಾಣದಲ್ಲಿ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 46 ಆಗಿದೆ.

ಹರಿಯಾಣದಲ್ಲಿ ಇಂಡಿಯಾ ಟುಡೇ ಸಿ-ವೋಟರ್, ಎಕ್ಸಿಸ್ ಮೈ ಇಂಡಿಯಾ, ರಿಪಬ್ಲಿಕ್ ಮ್ಯಾಟ್ರಿಝ್, ರಿಪಬ್ಲಿಕ್ ಪಿಮಾರ್ಕ್, ಪೀಪಲ್ಸ್ ಪಲ್ಸ್ ಸೇರಿದಂತೆ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ 45 ರಿಂದ 60 ಸ್ಥಾನಗಳನ್ನು ಗಳಿಸಲಿವೆ ಎಂದು ಅಂದಾಜಿಸಿದ್ದವು.

ಅಲ್ಲದೆ ಬಿಜೆಪಿಗೆ 18ರಿಂದ 32 ಸ್ಥಾನಗಳು ಮಾತ್ರ ಸಿಗಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಬಿಜೆಪಿ ಸರಳ ಬಹುಮತಕ್ಕೆ ಬೇಕಾಗಿರುವ 46 ಸ್ಥಾನಗಳತ್ತ ಮುನ್ನಡೆದಿದೆ. ಮತ್ತೊಂದೆಡೆ ಕಾಂಗ್ರೆಸ್ 35 ಸ್ಥಾನಗಳಿಗೆ ಸೀಮಿತಗೊಂಡಿದೆ.

ಇದರೊಂದಿಗೆ ಬಿಜೆಪಿ ಹರಿಯಾಣದಲ್ಲಿ 'ಹ್ಯಾಟ್ರಿಕ್' ಸಾಧನೆಯತ್ತ ಮುನ್ನಡೆದಿದೆ. ಅಲ್ಲದೆ ಮತಗಟ್ಟೆ ಭವಿಷ್ಯಗಳು ಹುಸಿಯಾಗುವ ಸಂಭವ ಕಂಡುಬಂದಿದೆ.

ಮತ್ತೊಂದೆಡೆ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದರೂ ಕಾಂಗ್ರೆಸ್‌ ಮೈತ್ರಿಕೂಟ ಮುನ್ನಡೆ ಗಳಿಸಲಿವೆ ಎಂದು ಮತಗಟ್ಟೆ ಭವಿಷ್ಯ ನುಡಿದಿತ್ತು. ಈಗ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫೆರೆನ್ಸ್ ಮೈತ್ರಿಕೂಟ ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲಾಗಿತ್ತು. ಇದರಿಂದ ಭಾರಿ ಟೀಕೆಗೆ ಗುರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.