ADVERTISEMENT

ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ 10 ಮೀಸಲಾತಿ: ಹರಿಯಾಣ ಸಿಎಂ ಸೈನಿ

ಪಿಟಿಐ
Published 17 ಜುಲೈ 2024, 12:00 IST
Last Updated 17 ಜುಲೈ 2024, 12:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಂಡೀಗಢ: ಪೊಲೀಸ್‌, ಅರಣ್ಯ ಗಾರ್ಡ್‌ ಹಾಗೂ ಜೈಲು ವಾರ್ಡನ್‌ ಸೇರಿ ಹಲವು ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಹರಿಯಾಣ ಸರ್ಕಾರ ಪ್ರಕಟಿಸಿದೆ. ಅಲ್ಲದೆ ವಯಸ್ಸಿನ ಮಿತಿ ಸಡಿಲಿಸುವುದಾಗಿಯೂ ತಿಳಿಸಿದೆ.

ಚಂಡೀಗಢದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ,‘ಕಾನ್‌ಸ್ಟೆಬಲ್, ಮೈನಿಂಗ್ ಗಾರ್ಡ್‌, ಫಾರೆಸ್ಟ್ ಗಾರ್ಡ್‌, ಜೈಲ್ ವಾರ್ಡನ್‌ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ಸರ್ಕಾರ ಮಾಡುವ ನೇರ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ ಇರಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಅಲ್ಲದೆ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯಸ್ಸಿನ ಮಿತಿಯನ್ನೂ ಸಡಿಲಗೊಳಿಸಲಾಗುವುದು. ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ಐದು ವರ್ಷಗಳ ರಿಯಾಯತಿ ಇರಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.