ADVERTISEMENT

ಹರಿಯಾಣದಲ್ಲಿ ಸೋಲು: ಮೈತ್ರಿ ಕಡಿದುಕೊಂಡ ಕಾಂಗ್ರೆಸ್ ಕಾಲೆಳೆದು ಕವನ ಬರೆದ ಛಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2024, 5:11 IST
Last Updated 9 ಅಕ್ಟೋಬರ್ 2024, 5:11 IST
<div class="paragraphs"><p>ಕಾಂಗ್ರೆಸ್‌ ಬಾವುಟ, ರಾಘವ್‌ ಛಡ್ಡಾ ಹಾಗೂ ಹರಿಯಾಣ ಚುನಾವಣೆ ಫಲಿತಾಂಶ</p></div>

ಕಾಂಗ್ರೆಸ್‌ ಬಾವುಟ, ರಾಘವ್‌ ಛಡ್ಡಾ ಹಾಗೂ ಹರಿಯಾಣ ಚುನಾವಣೆ ಫಲಿತಾಂಶ

   

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್‌ ಪಕ್ಷವನ್ನು ಎಎಪಿ ಸಂಸದ ರಾಘವ್‌ ಛಡ್ಡಾ ಅವರು ಕವನದ ಮೂಲಕ ಅಣಕಿಸಿದ್ದಾರೆ.

ಹರಿಯಾಣದಲ್ಲಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹಾಗೂ ಎಎಪಿ ಮಾತುಕತೆ ನಡೆಸಿದ್ದವು. ಆದರೆ, ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ, ಮೈತ್ರಿ ಮುರಿದು ಬಿದ್ದಿತ್ತು.

ADVERTISEMENT

90 ಸ್ಥಾನಗಳಿಗೆ ಅಕ್ಟೋಬರ್‌ 5ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ (ಅಕ್ಟೋಬರ್ 8ರಂದು) ಪ್ರಕಟವಾಗಿದೆ.

ಬಿಜೆಪಿ, 48 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದ್ದು, ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಮುಂದಾಗಿದೆ. ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ 37 ಕಡೆಯಷ್ಟೇ ಗೆಲುವು ಕಂಡಿದೆ. ಎಎಪಿ ಖಾತೆ ತೆರೆಯಲು ವಿಫಲವಾಗಿದೆ.

ಫಲಿತಾಂಶ ಪ್ರಕಟವಾದ ಬಳಿಕ ಎಕ್ಸ್‌/ಟ್ವಿಟರ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡಿರುವ ಛಡ್ಡಾ, 'ನೀವು ನಮ್ಮ ಬಯಕೆಗಳನ್ನು ಪರಿಗಣಿಸಿದ್ದರೆ, ಪರಿಸ್ಥಿತಿ ಭಿನ್ನವಾಗಿರುತ್ತಿತ್ತು.
ನಮ್ಮ ಆತ್ಮಗೌರವಕ್ಕೆ ಬೆಲೆ ಕೊಟ್ಟಿದ್ದರೆ, ಈ ಸಂಜೆಯೆ ವಿಭಿನ್ನ ವಾಗಿರುತ್ತಿತ್ತು
ನನ್ನ ಜತೆ ಇಲ್ಲದಿರುವುದಕ್ಕೆ ಅವರಿಗೂ ಪಶ್ಚಾತಾಪ ಆಗುತ್ತಿರಬೇಕು .
ಒಂದೊಮ್ಮೆ ಇಬ್ಬರೂ ಜತೆಗೂಡಿ ಹೆಜ್ಜೆ ಹಾಕುತ್ತಿದ್ದರೆ ಆ ಮಾತೇ ಬೇರೆ ಆಗಿರುತ್ತಿತ್ತು
' ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.