ADVERTISEMENT

ಚುನಾವಣೆಯಲ್ಲಿ ಮೋದಿಗೆ ಬಹುಮತ ಬಾರದಿದ್ದಕ್ಕೆ ಮನನೊಂದು BJP ಕಾರ್ಯಕರ್ತ ಆತ್ಮಹತ್ಯೆ

ಪಿಟಿಐ
Published 1 ಜುಲೈ 2024, 8:08 IST
Last Updated 1 ಜುಲೈ 2024, 8:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಂಡೀಗಢ: ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವಿಫಲವಾಗಿರುವುದಕ್ಕೆ ಮನನೊಂದು ಹರಿಯಾಣದ ಬಿಜೆಪಿ ಕಾರ್ಯಕರ್ತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಸುಖ್ವಿಂದರ್ (45) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಹಿಸಾರ್ ಜಿಲ್ಲೆಯ ತನ್ನ ಅತ್ತೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ADVERTISEMENT

ಚಾರ್ಖಿ ದಾದ್ರಿಯ ನಂದಾ ಗ್ರಾಮದ ನಿವಾಸಿಯಾಗಿರುವ ಸುಖ್ವಿಂದರ್ ಹಲವು ವರ್ಷಗಳಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಎಂದು ಆತನ ಸಹೋದರ ಜುಗ್ವಿಂದರ್ ಹೇಳಿದ್ದಾರೆ..

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟಬಹುಮತ ಸಿಗದಿರುವುದಕ್ಕೆ ಸುಖ್ವಿಂದರ್ ಮನನೊಂದಿದ್ದರು. ಆತನ ಮನವೊಲಿಸಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ಜುಗ್ವಿಂದರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.