ADVERTISEMENT

ಹರಿಯಾಣ: ಹಿರಿಯ ಅಧಿಕಾರಿಯ ಬಂಧನ

ಬಂದೂಕು ತೋರಿಸಿ ದಲಿತ ಕಾರ್ಮಿಕನಿಗೆ ಲೈಂಗಿಕ ಕಿರುಕುಳ

ಪಿಟಿಐ
Published 9 ನವೆಂಬರ್ 2024, 15:59 IST
Last Updated 9 ನವೆಂಬರ್ 2024, 15:59 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಹಿಸಾರ್‌, ಹರಿಯಾಣ: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಲಿ‌ತ ಕಾರ್ಮಿಕನಿಗೆ ಬಂದೂಕು ತೋರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹರಿಯಾಣದ ಹಿರಿಯ ಅಧಿಕಾರಿ ಕುಲ್‌ಭೂಷಣ್‌ ಬನ್ಸಾಲ್‌ ಅವರನ್ನು ಶನಿವಾರ ಬಂಧಿಸಲಾಗಿದೆ.

ADVERTISEMENT

‘ಕಿರುಕುಳ ನೀಡಿದ ಕುರಿತು ನೊಂದ ಕಾರ್ಮಿಕ, ದೂರು ನೀಡಿದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾಶರಿ ರಾಜೇಶ್‌ ಕುಮಾರ್ ಮೋಹನ್‌ ತಿಳಿಸಿದ್ದಾರೆ. 

ಬನ್ಸಾಲ್‌ ಅವರು ಹನ್ಸಿ ಉಪವಿಭಾಗದ ಮ್ಯಾಜಿಸ್ಟ್ರೇಟ್‌ ಆಗಿ ಕೆಲಸ ಮಾಡುತ್ತಿದ್ದು, ದಲಿತ ಕಾರ್ಮಿಕನನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.

‘ನಾನು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆರು ತಿಂಗಳ ಹಿಂದೆ ಅವರ ಮನೆಗೆ ಕರೆಸಿಕೊಂಡು, ನನಗೆ ಕಿರುಕುಳ ನೀಡಿದ್ದರು. ತದನಂತರ, ಅವರ ಕೃತ್ಯಗಳನ್ನು ಸಾಕ್ಷಿಯಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವೇಳೆ ಬಂದೂಕಿನಿಂದ ಬೆದರಿಸಿ, ಕೆಲಸದಿಂದ ಕಿತ್ತುಹಾಕಿದ್ದರು. ಬಳಿಕ ದೂರು ದಾಖಲಿಸಿದೆ’ ಎಂದು ಕಾರ್ಮಿಕ ದೂರಿನಲ್ಲಿ ತಿಳಿಸಿದ್ದಾರೆ.

ಬನ್ಸಾಲ್‌ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.