ADVERTISEMENT

Haryana Election Results: ಹರಿಯಾಣದಲ್ಲಿ ಸೋತವರು, ಗೆದ್ದ ಪ್ರಮುಖರ ವಿವರ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2024, 13:16 IST
Last Updated 8 ಅಕ್ಟೋಬರ್ 2024, 13:16 IST
<div class="paragraphs"><p>ಕಾಂಗ್ರೆಸ್, ಬಿಜೆಪಿ</p></div>

ಕಾಂಗ್ರೆಸ್, ಬಿಜೆಪಿ

   

ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ನಿಚ್ಚಳ ಬಹುಮತ ಸಾಧಿಸಿದೆ. ರಾಜ್ಯದಲ್ಲಿ ಗೆದ್ದ ಮತ್ತು ಸೋತ ಪ್ರಮುಖರ ವಿವರ ಇಲ್ಲಿದೆ.

ಹಿಸಾರ್‌ ವಿಧಾನಸಭಾ ಕ್ಷೇತ್ರದಲ್ಲಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಾವಿತ್ರಿ ಜಿಂದಾಲ್, 18,941ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ವಿಶೇಷವಾಗಿ, ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ.

ADVERTISEMENT

ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನೇಶ್ ಫೋಗಟ್ ಗೆದ್ದಿದ್ದು, ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಫೋಗಟ್ ಕಳೆದ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶ ಪಡೆದಿದ್ದರು. ಆದರೆ ತೂಕ ಹೆಚ್ಚಿಸಿಕೊಂಡ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹ ಮಾಡಲಾಗಿತ್ತು.

ಕಾಂಗ್ರೆಸ್‌ ನಾಯಕ ಭೂಪೇಂದರ್ ಸಿಂಗ್‌ ಹೂಡ ಅವರು ಗೆಲುವು ದಾಖಲಿಸಿದ್ದಾರೆ. ಮತ ಎಣಕೆಯ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ಅವರು ಅಂತಿಮವಾಗಿ ಗೆಲುವು ಸಾಧಿಸಿದರು.

ಕಾಂಗ್ರೆಸ್‌ ಮುಖಂಡರಾದ ಚಾಂದೇರ್‌ ಮೋಹನ್‌, ವಿನೇಶ್‌ ಪೋಗಟ್‌, ಆದಿತ್ಯಾ ಸುರ್ಜೆವಾಲ ಅವರು ಗೆಲುವು ಕಂಡಿದ್ದಾರೆ.

ಕಾಂಗ್ರೆಸ್‌ನ ಅನಿರುದ್ಧ ಚೌಧರಿ, ಉದಯ್‌ ಭಾನು, ಬೀಜೆಂದರ್‌ ಸಿಂಗ್‌, ಚಿರಂಜೀವಿ ರಾವ್‌ ಅವರು ಸೋಲುಂಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ನಾಯಕರಾದ ಆರ್ತಿ ಸಿಂಗ್‌ ರಾವ್‌, ಅನಿಲ್‌ ವಿಜ್‌, ಶೃತಿ ಚೌಧರಿ ಗೆಲುವು ಕಂಡಿದ್ದಾರೆ.

ಬಿಜೆಪಿಯ ಕ್ಯಾ. ಅಭಿಮನ್ಯು, ಓಂ ಪ್ರಕಾಶ್‌ ಧನಕರ್‌, ಬಿಷ್ಣೋಯಿ ಸೋಲು ಕಂಡಿದ್ದಾರೆ.

ಜೆಜೆಪಿ ಮತ್ತು ಐಎನ್‌ಎಲ್‌ಡಿ ದುಷ್ಯಂತ್‌ ಚೌತಾಲ, ಅಭಯ್‌ ಸಿಂಗ್‌ ಚೌತಲಾ ಅವರು ಸೋಲು ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.