ADVERTISEMENT

Haryana Election Results: ಫಲಿತಾಂಶ ಸ್ವೀಕರಿಸಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್

ಪಿಟಿಐ
Published 8 ಅಕ್ಟೋಬರ್ 2024, 14:19 IST
Last Updated 8 ಅಕ್ಟೋಬರ್ 2024, 14:19 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ‘ಹರಿಯಾಣದಲ್ಲಿ ನಮ್ಮ ಗೆಲುವನ್ನು ಕಿತ್ತುಕೊಳ್ಳಲಾಗಿದೆ... ಜನರು ಬದಲಾವಣೆಯನ್ನು ಬಯಸಿದ್ದರು. ಈ ಫಲಿತಾಂಶವು ಅವರ ಇಚ್ಛೆಗೆ ವಿರುದ್ಧವಾಗಿ ಬಂದಿದೆ. ಹರಿಯಾಣದ ಅಧ್ಯಾಯ ಇನ್ನೂ ಮುಗಿದಿಲ್ಲ. ನಾವು ಈ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಫಲಿತಾಂಶದ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಮತ್ತು ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಚುನಾವಣಾ ಆಯೋಗದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮತಎಣಿಕೆ ಪ್ರಕ್ರಿಯೆ ಹಾಗೂ ಇವಿಎಂಗಳ ಕಾರ್ಯವಿಧಾನದ ಕುರಿತು ಇಂದಿನ ಫಲಿತಾಂಶವು ಹಲವು ‘ಗಂಭೀರ ವಿಷಯ’ಗಳನ್ನು ಮುಂದಿಟ್ಟಿವೆ. ಮತಎಣಿಕೆಗೂ ಮೊದಲೇ ಹಲವು ಇವಿಎಂಗಳಲ್ಲಿ ಶೇ 99ರಷ್ಟು ಬ್ಯಾಟರಿ ಚಾರ್ಜ್‌ ಇತ್ತು. ಎಲ್ಲೆಲ್ಲಿ ಶೇ 99ರಷ್ಟು ಚಾರ್ಜ್‌ ಇದೆಯೊ ಅಲ್ಲಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಶೇ 60 ಅಥವಾ ಶೇ 70ರಷ್ಟು ಬ್ಯಾಟರಿ ಚಾರ್ಜ್‌ ಇದ್ದ ಇವಿಎಂಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ’ ಎಂದು ಪವನ್‌ ಖೇರಾ ದೂರಿದರು.

‘ಕೆಲವು ಜಿಲ್ಲೆಗಳ ಸುಮಾರು 14 ಕ್ಷೇತ್ರಗಳಲ್ಲಿ ಇವಿಎಂಗಳನ್ನು ತಿರುಚಲಾಗಿದೆ. ಮತಎಣಿಕೆ ಆರಂಭ
ವಾಗುತ್ತಿದ್ದಂತೆಯೇ ನಮ್ಮ ಅಭ್ಯರ್ಥಿಗಳು ನಮಗೆ ಮಾಹಿತಿ ನೀಡುತ್ತಿದ್ದರು. ಸಂಜೆಯವರೆಗೂ ನಮಗೆ ದೂರುಗಳು ಬರುತ್ತಲೇ ಇವೆ’ ಎಂದರು.

‘ಹರಿಯಾಣದಲ್ಲಿ ಇಂದು ಲೋಕತಂತ್ರವಲ್ಲ, ತಂತ್ರ ಗೆದ್ದಿದೆ. ನಮ್ಮ ಅಭ್ಯರ್ಥಿಗಳು ನಮಗೆ ನೀಡಿರುವ ದೂರುಗಳನ್ನು ಕ್ರೋಢಿಕರಿಸಿಕೊಂಡು, ಎರಡು ಮೂರು ದಿನಗಳಲ್ಲಿ ಚುನಾವಣಾ ಆಯೋಗದ ಮುಂದೆ ಹೋಗಲಿದ್ದೇವೆ’ ಎಂದು ಜೈರಾಮ್‌ ರಮೇಶ್‌ ಹೇಳಿದರು.

ಜಮ್ಮು–ಕಾಶ್ಮೀರದಲ್ಲಿ ಕಾಂಗ್ರೆಸ್‌–ಎನ್‌ಸಿ ಕೂಟದ ಗೆಲುವು ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧದ ಜನಾದೇಶವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷದ ಸೋಲು ಅನಿರೀಕ್ಷಿತವಾಗಿತ್ತು.
–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
‘ಹರಿಯಾಣದಲ್ಲಿ ಪರಿಸ್ಥಿತಿ ಹಿಂದಿನಂತೆ ಇರುವುದಿಲ್ಲ. 10 ವರ್ಷದ ನಂತರ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನಗಳನ್ನು ನಿಷ್ಫಲಗೊಳಿಸಿದವರನ್ನು ಪಕ್ಷದ ಹೈಕಮಾಂಡ್ ಖಂಡಿತ ಪತ್ತೆ ಹಚ್ಚುತ್ತದೆ.
–ಕುಮಾರಿ ಸೆಲ್ಜಾ, ಕಾಂಗ್ರೆಸ್ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.