ಚಂಡೀಗಢ: ಹರಿಯಾಣ ಸರ್ಕಾರವು ಅವಿವಾಹಿತರಿಗೆ ಮಾಸಿಕ ₹ 2750 ಭತ್ಯೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ವಾರ್ಷಿಕ ₹ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ 45 –60 ವಯಸ್ಸಿನ ಅವಿವಾಹಿತರಿಗೆ ಈ ಯೋಜನೆ ಅನ್ವಯವಾಗಲಿದೆ.
ಈ ಯೋಜನೆಯನ್ನು ಗುರುವಾರ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಘೋಷಣೆ ಮಾಡಿದ್ದು, ‘ವಾರ್ಷಿಕ ₹ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ, 45–60 ವರ್ಷದ ಅವಿವಾಹಿತ ಮಹಿಳೆಯರು ಹಾಗೂ ಪುರುಷರಿಗೆ ಮಾಸಿಕವಾಗಿ ₹ 2,750 ನೀಡಲಾಗುತ್ತದೆ ಎಂದು ಹೇಳಿದರು.
ಅಲ್ಲದೇ ವಾರ್ಷಿಕ ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇರುವ ಇರುವ 40–60 ವರ್ಷದೊಳಗಿನ ವಿಧವೆಯರೂ ಕೂಡ ಇಷ್ಟೇ ಮೊತ್ತದ ಭತ್ಯೆ ಪಡೆಯಲಿದ್ದಾರೆ.
ಈ ಹೊಸ ಯೋಜನೆಯಿಂದಾಗಿ ಸರ್ಕಾರಕ್ಕೆ ಹೆಚ್ಚುವರಿ ₹ 240 ಕೋಟಿ ಹೊರೆಯಾಗಲಿದೆ.
ಈ ಯೋಜನೆಯಿಂದಾಗಿ ಸುಮಾರು 65,000 ಅವಿವಾಹಿತರಿಗೆ ಹಾಗೂ 5,687 ವಿಧವೆಯರಿಗೆ ಈ ಯೋಜನೆಯಿಂದ ಲಾಭವಾಗಲಿದೆ.
‘ಈ ಹಣದಿಂದ ಅವರಿಗೆ ತಮ್ಮ ವೈಯಕ್ತಿಕ ಖರ್ಚುಗಳು ನಿಭಾಯಿಸಲು ಉಪಯೋಗವಾಗಲಿದೆ. ಕಡಿಮೆ ಆದಾಯ ಇರುವವರಿಗೆ ಘನತೆಯುಕ್ತ ಬದುಕು ಸಾಗಿಸಲು ನೆರವಾಗಲಿದೆ‘ ಎಂದು ಖಟ್ಟರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.