ADVERTISEMENT

ಹರಿಯಾಣ | ಕಾಂಗ್ರೆಸ್ ಮಣಿಯದಿದ್ದರೆ 90 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ: ಎಎಪಿ

ಪಿಟಿಐ
Published 9 ಸೆಪ್ಟೆಂಬರ್ 2024, 7:55 IST
Last Updated 9 ಸೆಪ್ಟೆಂಬರ್ 2024, 7:55 IST
<div class="paragraphs"><p>ಕಾಂಗ್ರೆಸ್, ಎಎಪಿ</p></div>

ಕಾಂಗ್ರೆಸ್, ಎಎಪಿ

   

ಸಂಗ್ರಹ ಚಿತ್ರ

ನವದೆಹಲಿ: ಒಂದು ವೇಳೆ ಕಾಂಗ್ರೆಸ್ ಸೀಟು‌ ಹಂಚಿಕೆಯನ್ನು ಅಂತಿಮಗೊಳಿಸದಿದ್ದರೆ, ಇಂದು ಸಂಜೆ ಎಲ್ಲಾ 90 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಯನ್ನು‌ ಘೋಷಿಸಲಾಗುವುದು ಎಂದು ಹರಿಯಾಣ ಎಎಪಿ ಘಟಕದ ಮುಖ್ಯಸ್ಥ ಸುಶೀಲ್‌ ಗುಪ್ತಾ ಹೇಳಿದ್ದಾರೆ.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಎಎಪಿ ಮೈತ್ರಿ ಕುರಿತ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗುಪ್ತಾ, ‘ಆಮ್‌ ಆದ್ಮಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇಂದು ಸಂಜೆಯೊಳಗೆ 90 ಕ್ಷೇತ್ರಗಳ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ‘ ಎಂದು ತಿಳಿಸಿದ್ದಾರೆ.

‘ಉಭಯ ಪಕ್ಷಗಳ ನಡುವೆ ಮಾತುಕತೆ ಸ್ಥಗಿತಗೊಂಡಿದ್ದು, ಎಎಪಿ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟರೆ, ಕಾಂಗ್ರೆಸ್ 5 ಕ್ಷೇತ್ರಗಳನ್ನು ಬಿಟ್ಟು ಕೊಡುವುದಾಗಿ ಹೇಳಿದೆ. ಈ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯೆಗಾಗಿ ಎಎಪಿ ಕಾಯುತ್ತಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್‌ 12 ಕೊನೆಯ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.