ADVERTISEMENT

ಸಂವಿಧಾನ ನಾಶಕ್ಕೆ ಬಿಜೆಪಿ-ಆರ್‌ಎಸ್‌ಎಸ್ ಯತ್ನ: ರಾಹುಲ್ ಗಾಂಧಿ

ಪಿಟಿಐ
Published 3 ಅಕ್ಟೋಬರ್ 2024, 10:02 IST
Last Updated 3 ಅಕ್ಟೋಬರ್ 2024, 10:02 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಚಂಡೀಗಢ: 'ಸಂವಿಧಾನ ನಾಶಪಡಿಸಲು ಬಿಜೆಪಿ-ಆರ್‌ಎಸ್‌ಎಸ್ ಯತ್ನಿಸುತ್ತಿದೆ' ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ADVERTISEMENT

ಹರಿಯಾಣದಲ್ಲಿ ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು ಮಾತನಾಡಿದ ರಾಹುಲ್, 'ಇದು ನಿಮ್ಮೆಲ್ಲರ ಸಂವಿಧಾನವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಸಂವಿಧಾನವಾಗಿದೆ. ಇದು ನಿಮ್ಮನ್ನು ರಕ್ಷಿಸುತ್ತದೆ' ಎಂದು ಪುನರುಚ್ಚರಿಸಿದ್ದಾರೆ.

'ಆದರೆ ಡಾ. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಈ ಸಂವಿಧಾನವನ್ನು ನಾಶಪಡಿಸಲು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಯತ್ನಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಒಂದು ವೇಳೆ ಈ ಸಂವಿಧಾನ ನಾಶವಾದ್ದಲ್ಲಿ ದೇಶದ ಬಡ ಜನರ ಬಳಿ ಬೇರೆ ಏನೂ ಉಳಿಯುವುದಿಲ್ಲ. ಹಾಗಾಗಿ ಸಂವಿಧಾನವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.

'ಇದು ಸಿದ್ಧಾಂತದ ನಡುವಣ ಹೋರಾಟವಾಗಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಹರಿಯಾಣ ಚುನಾವಣೆ ಬಂದಿದೆ. ಒಂದೆಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ-ಆರ್‌ಎಸ್‌ಎಸ್ ಇದೆ' ಎಂದು ಅವರು ಹೇಳಿದ್ದಾರೆ.

'ಸಂವಿಧಾನದಿಂದಲೇ ದೇಶ ನಡೆಯಬೇಕು. ಎಲ್ಲರಿಗೂ ಪ್ರಯೋಜನ ಸಿಗಬೇಕು. ದೇಶ, ಅಭಿವೃದ್ಧಿ, ಸೇನೆ, ನೌಕರವರ್ಗದ ಬಗ್ಗೆ ಯೋಚಿಸಿದಾಗ ಎಲ್ಲವನ್ನೂ ಸಂವಿಧಾನದಿಂದಲೇ ಪ್ರಾರಂಭಿಸುತ್ತೇವೆ. ಆದರೆ ಮತ್ತೊಂದೆಡೆ ಬಿಜೆಪಿ-ಆರ್‌ಎಸ್‌ಎಸ್‌ಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನವನ್ನು ದುರ್ಬಲಪಡಿಸಲು ಎಲ್ಲವನ್ನು ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.