ಲಖನೌ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಇತ್ತೀಚೆಗೆ ಸತ್ಸಂಗ ನಡೆಸಿದ್ದ ಸ್ವಯಂ ಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರು ಕಾಸ್‌ಗಂಜ್‌ನ ಬಹದ್ದೂರ್ ನಗರ ಗ್ರಾಮದಲ್ಲಿರುವ ಆಶ್ರಮ ತಲುಪಿದ್ದಾರೆ ಎಂದು ಅವರ ವಕೀಲರು ಬುಧವಾರ ತಿಳಿಸಿದ್ದಾರೆ.
ಜುಲೈ 2ರಂದು ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 121 ಜನವರು ಮೃತಪಟ್ಟಿದ್ದರು.
‘ಆಶ್ರಮವನ್ನು ತಲುಪಿರುವ ಬಾಬಾ ಅವರು ಇಲ್ಲಿಯೇ ಇರುತ್ತಾರೆ. ತಮ್ಮ ಇನ್ನೊಂದು ಆಶ್ರಮದಿಂದ ಅವರು ಇಲ್ಲಿಗೆ ಬಂದಿದ್ದಾರೆ. ಇಲ್ಲಿಯವರೆಗೆ ಅವರು ಯಾವುದೇ ಹೋಟೆಲ್ ಅಥವಾ ಅನ್ಯ ದೇಶದಲ್ಲಿ ಇರಲಿಲ್ಲ’ ಎಂದು ಬಾಬಾ ಅವರ ವಕೀಲ ಎ.ಪಿ.ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಈ ಗ್ರಾಮವು ಬಾಬಾ ಅವರ ಜನ್ಮಸ್ಥಳವಾಗಿದ್ದು, ಅವರು 2023ರಲ್ಲಿ ಕೊನೆಯದಾಗಿ ಇಲ್ಲಿಗೆ ಬಂದಿದ್ದರು ಎಂದು ಅವರು ಹೇಳಿದರು.
ಘಟನೆಯ ತನಿಖೆಗಾಗಿ ಉತ್ತರ ಪ್ರದೇಶದ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ನ್ಯಾಯಾಂಗ ಆಯೋಗವನ್ನು ರಚಿಸಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಬಾಬಾ ಅವರನ್ನು ಆರೋಪಿ ಎಂದು ನಮೂದಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.