ADVERTISEMENT

ಮಣಿಪುರ ಹಿಂಸಾಚಾರ ‌| ಪರಸ್ಪರ ಮಾತುಕತೆಯೇ ಮದ್ದು: ರಾಜನಾಥ ಸಿಂಗ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 12:37 IST
Last Updated 1 ನವೆಂಬರ್ 2023, 12:37 IST
ರಾಜನಾಥ ಸಿಂಗ್‌ –ಪಿಟಿಐ ಚಿತ್ರ
ರಾಜನಾಥ ಸಿಂಗ್‌ –ಪಿಟಿಐ ಚಿತ್ರ   

ಟಿಪಾ (ಮಿಜೋರಾಂ) (ಪಿಟಿಐ): ‘ಹಿಂಸಾಚಾರಪೀಡಿತ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳು ಒಟ್ಟಾಗಿ ಕುಳಿತು ಬಿಚ್ಚುಮನಸ್ಸಿನಿಂದ ಚರ್ಚಿಸಬೇಕು. ಆ ಮೂಲಕ ಎರಡೂ ಕಡೆಯ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸಲಹೆ ನೀಡಿದ್ದಾರೆ.

ಮಿಜೋರಾಂ ವಿಧಾನಸಭಾ ಚುನಾವಣೆ ಅಂಗವಾಗಿ ಬಿಜೆಪಿಯಿಂದ ಬುಧವಾರ ಇಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಸಮಸ್ಯೆಯ ಪರಿಹಾರಕ್ಕೆ ಹಿಂಸೆ ಪರಿಹಾರವಲ್ಲ. ಎರಡೂ ಕಡೆಯವರು ಕುಳಿತು ಪರಸ್ಪರ ಮಾತುಕತೆ ನಡೆಸಬೇಕು. ಸಂಘರ್ಷಪೀಡಿತ ಕಣಿವೆ ರಾಜ್ಯದ ಪರಿಸ್ಥಿತಿ ಸುಧಾರಿಸಲು ಮುಂದಾಗಬೇಕು’ ಎಂದು ಹೇಳಿದರು. 

ಮಣಿಪುರದ ಹಿಂಸಾಚಾರ ಹೊರತಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಈಶಾನ್ಯ ಭಾರತವು ಶಾಂತಿಯುತವಾಗಿತ್ತು. ಆದರೆ, ಈಗ ಅಲ್ಲಿ ಸೃಷ್ಟಿಯಾಗಿರುವ ಸಂಘರ್ಷವೂ ನಮಗೆ ನೋವು ತರಿಸಿದೆ ಎಂದರು.

ADVERTISEMENT

‘ಮಣಿಪುರ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.