ADVERTISEMENT

Ayodhya Ram Mandir: ಆಹ್ವಾನ ಬಂದಿಲ್ಲ, ರಾಮಲಲ್ಲಾ ಎಲ್ಲರಿಗೂ ಸೇರಿದ್ದು: ಉದ್ಧವ್

ಪಿಟಿಐ
Published 30 ಡಿಸೆಂಬರ್ 2023, 12:32 IST
Last Updated 30 ಡಿಸೆಂಬರ್ 2023, 12:32 IST
<div class="paragraphs"><p>ಉದ್ಧವ್ ಠಾಕ್ರೆ</p></div>

ಉದ್ಧವ್ ಠಾಕ್ರೆ

   

(ಪಿಟಿಐ ಚಿತ್ರ)

ಮುಂಬೈ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಮಗೆ ಈವರೆಗೆ ಆಹ್ವಾನ ಬಂದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.

ADVERTISEMENT

'ರಾಮಲಲ್ಲಾ' ಎಲ್ಲರಿಗೂ ಸೇರಿದವರಾಗಿರುವುದರಿಂದ ತಮಗೆ ಔಪಚಾರಿಕ ಆಹ್ವಾನದ ಅಗತ್ಯವಿಲ್ಲ. ತಾವು ಬಯಸಿದಾಗೆಲ್ಲಾ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಆಹ್ವಾನ ನೀಡಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿವಸೇನಾ ಸುದೀರ್ಘ ಹೋರಾಟವನ್ನು ನಡೆಸಿದೆ. ರಾಮಮಂದಿರ ಹಾಗೂ ಹಿಂದುತ್ವದ ಪರ ಹೋರಾಡಿದ್ದಕ್ಕಾಗಿ ತಮ್ಮ ತಂದೆ, ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಮತದಾನದ ಹಕ್ಕನ್ನು ಉಪಚುನಾವಣೆಯೊಂದರ ಸಂದರ್ಭ ಕಿತ್ತುಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಅಯೋಧ್ಯೆಗೆ ಭೇಟಿ ನೀಡಿರುವುದನ್ನು ಠಾಕ್ರೆ ನೆನಪಿಸಿಕೊಂಡರು.

ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಜಕೀಯಗೊಳಿಸಬಾರದು. ರಾಮ ದೇವರು ಕೇವಲ ಒಂದು ಪಕ್ಷದ ಆಸ್ತಿಯಲ್ಲ. ಕೋಟ್ಯಂತರ ಜನರ ನಂಬಿಕೆ ಅಡಗಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.