ADVERTISEMENT

ನಮೋ ಟಿ.ವಿ ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದರು ಮೋದಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 12:36 IST
Last Updated 11 ಏಪ್ರಿಲ್ 2019, 12:36 IST
   

ನವದೆಹಲಿ: ನಮೋ ಟಿ.ವಿಯ ಮಾಲೀಕತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕೇಳಿದಾಗ, ಅದನ್ನು ನಿರ್ವಹಣೆ ಮಾಡುತ್ತಿರುವವರುಯಾರು ಎಂದು ನನಗೆ ಗೊತ್ತಿಲ್ಲ.ನನಗದನ್ನು ವೀಕ್ಷಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಏಪ್ರಿಲ್ 5ರಂದು ಎಬಿಪಿ ನ್ಯೂಸ್ ಸಂದರ್ಶನದಲ್ಲಿ ಮೋದಿವರಿಗೆ ಈ ಪ್ರಶ್ನೆ ಕೇಳಲಾಗಿತ್ತು.

ಆದರೆ ನರೇಂದ್ರ ಮೋದಿ ಹೆಸರಿನಲ್ಲಿರುವ ನಮೋ ಟಿ.ವಿಯನ್ನು ನಾವೇ ನಿರ್ವಹಿಸುತ್ತಿದ್ದೇವೆ ಎಂದು ಬಿಜೆಪಿಯ ಐಟಿ ವಿಭಾಗ ಒಪ್ಪಿಕೊಂಡಿದೆ.ನಮೋ ಆ್ಯಪ್‌ ಭಾಗವಾಗಿರುವ ನಮೋ ಟಿ.ವಿಯ ಪ್ರಸಾರಕ್ಕಾಗಿ ನಾವು ಡಿಟಿಎಚ್‌ನಲ್ಲಿ ಸ್ಲಾಟ್ ಖರೀದಿಸಿದ್ದೇವೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಧಾನಿ ನರೇಂದ್ರಮೋದಿ ಅವರ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡುವುದರ ಜತೆಗೆ ನಮೋ ಟಿ.ವಿ ಪ್ರಸಾರಕ್ಕೂ ಆಯೋಗ ನಿರ್ಬಂಧ ಹೇರಿದೆ. ರಾಜಕಾರಣಿಗಳು ಮತ್ತು ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಚಲನಚಿತ್ರ, ಕಿರುಚಿತ್ರಗಳಿಗೆ ಚುನಾವಣಾ ಆಯೋಗದ ನಿರ್ಬಂಧವಿದೆ.

ADVERTISEMENT

ಪಿಎಂ ನರೇಂದ್ರ ಮೋದಿ ಸಿನಿಮಾ ಇಂದು (ಏಪ್ರಿಲ್ 11)ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆಗೆ ಒಂದು ದಿನ ಮುಂಚೆ ಚುನಾವಣಾ ಆಯೋಗ ಈ ರೀತಿ ನಿರ್ಬಂಧ ಹೇರಿದೆ.

ಮೋದಿ ಸಿನಿಮಾಗೆ ನಿರ್ಬಂಧ: ನೆಟಿಜನ್‍ಗಳು ಏನಂತಾರೆ?
ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಯಿಸಿದ್ದು ಹೀಗೆ.

2014ರ ನಂತರ ನಮೋ ಮತ್ತು ಭಕ್ತರ ಪಾಲಿನ ಕೆಟ್ಟ ದಿನ
1. ಚುನಾವಣೆ ಮುಗಿಯುವವರೆಗೆ ಪಿಎಂ ಮೋದಿಯ ಜೀವನಾಧರಿತ ಸಿನಿಮಾ ಬಿಡುಗಡೆಗೆ ನಿರ್ಬಂಧ.
2. ಈ ನಿರ್ಬಂಧ ನಮೋ ಟಿ.ವಿಗೂ ಅನ್ವಯಿಸಲಿದೆ.
3. ರಫೇಲ್ ಸಾಕ್ಷ್ಯ ಕದ್ದ ದಾಖಲೆ ಎಂಬ ಕೇಂದ್ರದ ವಾದವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.