ADVERTISEMENT

ಕುಂದುಕೊರತೆ ಅಧಿಕಾರಿ ನೇಮಕದ ಬಗ್ಗೆ ಜು.8ರೊಳಗೆ ತಿಳಿಸಿ: ಹೈಕೋರ್ಟ್‌ ಸೂಚನೆ

ಪಿಟಿಐ
Published 6 ಜುಲೈ 2021, 10:04 IST
Last Updated 6 ಜುಲೈ 2021, 10:04 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ ಗ್ರಾಹಕರ ಕುಂದುಕೊರತೆ ಅಧಿಕಾರಿಯನ್ನು (ಆರ್‌ಜಿಒ) ಯಾವಾಗ ನೇಮಕ ಮಾಡಲಾಗುವುದು ಎಂಬ ಬಗ್ಗೆ ಜುಲೈ 8ರೊಳಗೆ ತಿಳಿಸುವಂತೆ ಟ್ವಿಟರ್‌ಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಕುಂದುಕೊರತೆ ಅಧಿಕಾರಿ ನೇಮಕದ ಕಾರ್ಯ ಪ್ರಗತಿಯಲ್ಲಿದೆ ಎಂದು ಟ್ವಿಟರ್‌ ಹೇಳಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯವು ಈ ಸೂಚನೆ ನೀಡಿದೆ.

ಈ ಹಿಂದೆ ಮಧ್ಯಂತರ ಅವಧಿಗೆ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ, ಅವರು ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.