ಮುಂಬೈ: ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣವನ್ನು ‘ಇದೊಂದು ಗಂಭೀರ ಘಟನೆ’ ಎಂದು ಬಣ್ಣಿಸಿರುವ ಮುಂಬೈ ಹೈಕೋರ್ಟ್, ‘ಮುಂಬೈ ಮಹಾನಗರದಲ್ಲೂ ಇಂಥದ್ದೇ ಗಂಭೀರ ಸಮಸ್ಯೆಗಳಿವೆ’ ಎಂದು ಎಚ್ಚರಿಸಿದೆ.
ಭಿವಂಡಿ ಪವರ್‌ಲೂಮ್ ಟೌನ್‌ನಲ್ಲಿ ಕಟ್ಟಡ ಕುಸಿತ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಮುಖ್ಯ ನಾಯಮೂರ್ತಿ ದೀಪಾಂಕರ್ ದತ್ತಾ ಅವರ ನೇತೃತ್ವದ ನ್ಯಾಯಪೀಠ, ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ, ಬೃಹನ್‌ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ, ಭಿವಂಡಿ–ನಿಝಾಂಪುರ ನಗರಸಭೆ, ಕಲ್ಯಾಣ್– ದೊಂಬಿವಿಲಿ, ಠಾಣೆ ಮತ್ತು ನವಿ ಮುಂಬೈನ ನಗರಸಭೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದೆ.
ಕಲ್ಯಾಣ್–ದೊಂಬಿವಿಲಿಯ ಕಟ್ಟಡ ನಿರ್ಮಾಣ ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅವರು 40 ಮಂದಿಯನ್ನು ಬಲಿತೆಗೆದುಕೊಂಡ ಭಿವಂಡಿ ಕಟ್ಟಡ ಕುಸಿತ ಪ್ರಕರಣ ಒಂದು ಗಂಭೀರ ಘಟನೆಯಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.