ADVERTISEMENT

ಐಬಿಎಂ ಸಾಫ್ಟ್‌ವೇರ್‌ ಖರೀದಿಸಿದ ಎಚ್‌ಸಿಎಲ್‌

ಪಿಟಿಐ
Published 7 ಡಿಸೆಂಬರ್ 2018, 20:00 IST
Last Updated 7 ಡಿಸೆಂಬರ್ 2018, 20:00 IST
   

ನವದೆಹಲಿ: ಎಚ್‌ಸಿಎಲ್‌ ಟೆಕ್ನಾಲಜೀಸ್‌, ಐಬಿಎಂನ ಆಯ್ದ ಸಾಫ್ಟ್‌ವೇರ್‌ ಉತ್ಪನ್ನಗಳನ್ನು ₹ 12,700 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.

ಭಾರತದ ಐ.ಟಿ ಸೇವಾ ವಲಯದಲ್ಲಿನ ಅತಿದೊಡ್ಡ ಮತ್ತು ದೇಶಿ ಕಾರ್ಪೊರೇಟ್‌ ಜಗತ್ತಿನಲ್ಲಿನ 10ನೇ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆ ಇದಾಗಿದೆ.

ಸುರಕ್ಷತೆ, ಮಾರುಕಟ್ಟೆ, ವಾಣಿಜ್ಯ ಸೇರಿ ಏಳು ಉತ್ಪನ್ನಗಳನ್ನು ಖರೀದಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಮಧ್ಯಭಾಗದಲ್ಲಿ ಈ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.