ADVERTISEMENT

ಭಾರತ ರತ್ನ ಘೋಷಣೆ ಬಗ್ಗೆ ಭಿನ್ನಾಭಿಪ್ರಾಯ ಬೇಡ: ವಿಪಕ್ಷಗಳಿಗೆ ದೇವೇಗೌಡ ಕಿವಿಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2024, 10:27 IST
Last Updated 10 ಫೆಬ್ರುವರಿ 2024, 10:27 IST
<div class="paragraphs"><p>ರಾಜಸಭೆಯಲ್ಲಿ&nbsp;ಎಚ್‌.ಡಿ.ದೇವೇಗೌಡ ಮಾತನಾಡಿದರು.</p></div>

ರಾಜಸಭೆಯಲ್ಲಿ ಎಚ್‌.ಡಿ.ದೇವೇಗೌಡ ಮಾತನಾಡಿದರು.

   

ನವದೆಹಲಿ: ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ 'ಭಾರತರತ್ನ' ಪುರಸ್ಕಾರ ಘೋಷಣೆ ಮಾಡಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಸಂತಸ ವ್ಯಕ್ತಪಡಿಸಿದರು. 

ಶನಿವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಈ ಗೌರವಕ್ಕೆ ಅರ್ಹರು, ಮಹಾನ್ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆ ಮಾಡುವುದು ಅಥವಾ ಟೀಕಿಸುವುದು ಸರಿಯಲ್ಲ’ ಎಂದರು. 

ADVERTISEMENT

ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಹಾಜರಾದ ಬಗ್ಗೆ ಮಾತನಾಡಿದ ಅವರು, ‘ಈ ದೇಶವನ್ನು ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ’ ಎಂದರು.

ರಾಮಮಂದಿರ ನಿರ್ಮಾಣದಿಂದ ಕೋಟ್ಯಂತರ ಭಾರತೀಯರ ಕನಸು ಸಾಕಾರವಾಗಿದೆ. ಅದು ನನ್ನ ಪಾಲಿಗೆ ಭಕ್ತಿ ಪರವಶತೆಯ ಕ್ಷಣವಾಗಿತ್ತು. ಶ್ರೀರಾಮದೇವರು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇರುವವನು ಎನ್ನುವುದಕ್ಕೆ ಅದುವೇ ಸಾಕ್ಷಿ. ಶ್ರೀರಾಮರು ಸದ್ವಿಚಾರಗಳು ಮತ್ತು ದಯೆ, ಪ್ರೀತಿಯ ಪ್ರತೀಕ. ಹೀಗಾಗಿ ಪ್ರತಿಯೊಬ್ಬರಿಗೂ ಆ ರಾಮನು ಆರಾಧ್ಯ ದೈವ ಎಂದು ಬಣ್ಣಿಸಿದರು. 

ಶ್ರೀರಾಮ ದೇವರ ತತ್ವಾದರ್ಶಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಪ್ರಭಾವಿತರಾಗಿದ್ದರು. ಅಲ್ಲದೆ, ಶ್ರೀರಾಮರನ್ನು ಬಾಪೂ ಅವರು ನಮ್ಮ ದೇಶದ ಸದ್ಗುಣಗಳ ಪ್ರತೀಕವನ್ನಾಗಿಸಿದರು. ಆ ರಾಮರ ಆಶೀರ್ವಾದ, ಕರುಣೆಯಿಂದಲೇ ಅವರು ಭಾರತವನ್ನು ಒಗ್ಗೂಡಿಸಿದರು ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.