ನವದೆಹಲಿ : ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಕಳೆದ ಮಂಗಳವಾರ ನಡೆದ ವಿಶ್ವ ಆರೋಗ್ಯ ಪರಿಷತ್ತಿನ ಸಭೆಯಲ್ಲಿ ಭಾರತದ ಪ್ರತಿನಿಧಿಯನ್ನು ಈ ಹುದ್ದೆಗೆಆಯ್ಕೆ ಮಾಡುವ ಪ್ರಸ್ತಾವಕ್ಕೆ 194 ರಾಷ್ಟ್ರಗಳು ಸಹಿ ಮಾಡಿದ್ದವು.ಕಾರ್ಯಕಾರಿ ಮಂಡಳಿಗೆ ಮೂರು ವರ್ಷಗಳ ಅವಧಿಗೆ ಭಾರತಕ್ಕೆ ಸದಸ್ಯತ್ವ ನೀಡಲು ವಿಶ್ವ ಸಂಸ್ಥೆಯ ಆಗ್ನೇಯ ಏಷ್ಯಾ ಗುಂಪಿನ 34 ಸದಸ್ಯ ರಾಷ್ಟ್ರಗಳು ಕಳೆದ ವರ್ಷ ತೀರ್ಮಾನಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.