ADVERTISEMENT

ಔಷಧಗಳ ಉತ್ಪಾದನೆ ನಿಯಂತ್ರಣ ಅಧಿಕಾರ: ಕೇಂದ್ರ ಅಥವಾ ರಾಜ್ಯಕ್ಕೆ ವಹಿಸುವ ಪ್ರಸ್ತಾವ

ಕರಡು ಮಸೂದೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 13:30 IST
Last Updated 19 ಜುಲೈ 2023, 13:30 IST
-
-   

ನವದೆಹಲಿ: ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆ ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಇಲ್ಲವೇ ರಾಜ್ಯಗಳ ಪ್ರಾಧಿಕಾರಕ್ಕೆ ವಹಿಸಬೇಕು ಎಂಬ ಪ್ರಸ್ತಾವವನ್ನು ಆರೋಗ್ಯ ಸಚಿವಾಲಯ ಮುಂದಿಟ್ಟಿದೆ.

ಸಚಿವಾಲಯವು ಈ ವಿಷಯಕ್ಕೆ ಸಂಬಂಧಿಸಿ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಬೇಕಿದೆ.

ಕೇಂದ್ರೀಯ ಔಷಧಗಳ ಪ್ರಮಾಣಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮೂಲಕವೇ ನಿಯಂತ್ರಿಸಬೇಕು ಎಂದು ಈ ಮೊದಲಿನ ಪ್ರಸ್ತಾವವನ್ನು ಸಚಿವಾಲಯ ಈಗ ಬದಲಿಸಿದೆ.

ADVERTISEMENT

ಈಗಿರುವ ವ್ಯವಸ್ಥೆಯಂತೆ, ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ರಾಜ್ಯ ಸರ್ಕಾರಗಳ ಅಧೀನದ ಔಷಧ ನಿಯಂತ್ರಕ ಸಂಸ್ಥೆಗಳ ಮೂಲಕವೇ ನಿಯಂತ್ರಿಸಲಾಗುತ್ತಿದೆ.

ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿ, ಆನ್‌ಲೈನ್‌ ಮೂಲಕ ಔಷಧಗಳ ಮಾರಾಟ/ವಿತರಣೆಯ ನಿಯಂತ್ರಣ, ನಿರ್ಬಂಧ ಅಥವಾ ನಿಷೇಧ ಮಾಡಬಹುದು ಎಂದು ‘ಹೊಸ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕ ಮಸೂದೆ,2023’ ಕರಡಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.