ADVERTISEMENT

ನೀಟ್‌–ಪಿಜಿ ಕೌನ್ಸಲಿಂಗ್‌: ಕಟ್‌ ಆಫ್‌ ಅಂಕ ಶೂನ್ಯಕ್ಕೆ ಇಳಿಕೆ

ಪಿಟಿಐ
Published 20 ಸೆಪ್ಟೆಂಬರ್ 2023, 20:29 IST
Last Updated 20 ಸೆಪ್ಟೆಂಬರ್ 2023, 20:29 IST
   

ನವದೆಹಲಿ: ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌–ಪಿ.ಜಿ) ಕೌನ್ಸಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್‌ ಆಫ್‌ ಅಂಕವನ್ನು ಶೂನ್ಯಕ್ಕೆ ತಗ್ಗಿಸಿದೆ.

ಇದರಿಂದಾಗಿ ಪ್ರಸಕ್ತ ವರ್ಷ ನೀಟ್‌ ಪರೀಕ್ಷೆ ಬರೆದ ಅಭ್ಯರ್ಥಿಗಳೆಲ್ಲರೂ ಕೌನ್ಸಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.

ಕಟ್‌ ಅಫ್‌ ಅಂಕ ಪ್ರಮಾಣವನ್ನು ತಗ್ಗಿಸಿದ ನಂತರ ಅರ್ಹತೆ ಪಡೆದ ಅಭ್ಯರ್ಥಿಗಳಿಗಾಗಿ ಹೊಸದಾಗಿ ನೋಂದಣಿ ಮತ್ತು ವಿಷಯ ಆಯ್ಕೆಗೆ ಅವಕಾಶ ಕಲ್ಪಿಸಲು ಮೂರನೇ ಸುತ್ತಿನ ಕೌನ್ಸಲಿಂಗ್‌ ಪ್ರಕ್ರಿಯೆಯನ್ನು ಮರು ಆರಂಭಿಸಲಾಗುತ್ತದೆ ಎಂದು ಅದು ತಿಳಿಸಿದೆ.

ADVERTISEMENT

ಈಗಾಗಲೇ ನೋಂದಾಯಿಸಿದ ಅಭ್ಯರ್ಥಿಗಳು ಮತ್ತೆ ನೋಂದಾಯಿಸುವ ಅಗತ್ಯವಿಲ್ಲ. ಆದರೆ ತಮ್ಮ ಆಯ್ಕೆಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.