ADVERTISEMENT

ಉಷ್ಣತೆ ಏರಿಕೆ ಮಹಿಳೆಯರಿಗೆ ಮತ್ತೊಂದು ಸವಾಲು: ಹಿಲರಿ ಕ್ಲಿಂಟನ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 14:31 IST
Last Updated 5 ಫೆಬ್ರುವರಿ 2023, 14:31 IST
ಹಿಲರಿ ಕ್ಲಿಂಟನ್‌
ಹಿಲರಿ ಕ್ಲಿಂಟನ್‌   

ಅಹಮದಾಬಾದ್‌: ತಾಪಮಾನ ಬದಲಾವಣೆಯಿಂದಾಗುವ ಉಷ್ಣತೆ ಏರಿಕೆಯ ವಾತಾವರಣವು ಮಹಿಳಾ ಕಾರ್ಮಿಕರಿಗೆ ಸವಾಲಾಗಿದೆ. ‘ಜಾಗತಿಕ ಹವಾಮಾನ ಸ್ಥಿತಿಸ್ಥಾಪಕತ್ವ ನಿಧಿ’ ಇಂಥ ಮಹಿಳೆಯರಿಗೆ ನೆರವಾಗಲಿದೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಭಾನುವಾರ ಹೇಳಿದರು.

ಗುಜರಾತ್‌ಗೆ ಎರಡು ದಿನ ಭೇಟಿ ನೀಡಿರುವ ಕ್ಲಿಂಟನ್ ಅವರು ಮಹಿಳಾ ಸ್ವಯಂ ಉದ್ಯೋಗಿಗಳ ಸಂಘವನ್ನು (ಎಸ್‌ಇಡಬ್ಲ್ಯುಎ) ಉದ್ದೇಶಿಸಿ ಮಾತನಾಡಿದರು. ಹಲವಾರು ಅಡೆತಡೆಗಳನ್ನು ಎದುರಿಸಿ ಮುಂದೆ ಬರುತ್ತಿರುವ ಮಹಿಳೆಯರಿಗೆ ತಾಪಮಾನ ಬದಲಾವಣೆ ಸವಾಲು ಎದುರಿಸಲು ‘ಹವಾಮಾನ ಸ್ಥಿತಿಸ್ಥಾಪಕತ್ವ ನಿಧಿ’ ಸ್ಥಾಪಿಸುತ್ತಿದ್ದು, ಈ ಗುರಿ ಸಾಧನೆಗೆ ಎಲ್ಲರು ಒಗ್ಗೂಡಬೇಕು ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT