ADVERTISEMENT

ಕೇರಳದಲ್ಲಿ ಭಾರಿ ಮಳೆ: 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದ ಐಎಂಡಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2023, 9:50 IST
Last Updated 29 ಸೆಪ್ಟೆಂಬರ್ 2023, 9:50 IST
<div class="paragraphs"><p> ಸುರಿಯುತ್ತಿರುವ ಮಳೆಯ ಮಧ್ಯೆಯೇ ವ್ಯಕ್ತಿಯೊಬ್ಬರು ಸೈಕಲ್‌ ಸವಾರಿ ಮಾಡಿದರು – ಪಿಟಿಐ ಚಿತ್ರ</p></div>

ಸುರಿಯುತ್ತಿರುವ ಮಳೆಯ ಮಧ್ಯೆಯೇ ವ್ಯಕ್ತಿಯೊಬ್ಬರು ಸೈಕಲ್‌ ಸವಾರಿ ಮಾಡಿದರು – ಪಿಟಿಐ ಚಿತ್ರ

   

ಕೇರಳ: ಇಡುಕ್ಕಿ, ಎರ್ನಾಕುಲಂ, ಕೋಯಿಕ್ಕೋಡ್‌, ಕಣ್ಣೂರು, ಕಾಸರಗೋಡು, ತ್ರಿಶೂರ್‌ ಸೇರಿದಂತೆ ಕೇರಳದ 10 ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

6 ರಿಂದ 11 ಸೆಂ.ಮೀ ಮಳೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. 

ADVERTISEMENT

ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಚಂಡಮಾರುತದ  ಕಾರಣದಿಂದ ಜೋರಾದ ಗಾಳಿ ಬೀಸಲಿದೆ ಎಂದು ಐಎಂಡಿ  ಮೂಲಗಳು ತಿಳಿಸಿವೆ. ಹವಾಮಾನ ಇಲಾಖೆ ಎಕ್ಸ್‌ನಲ್ಲಿ ‘28 ಹಾಗೂ 29ರಂದು ಕೇರಳದಲ್ಲಿ ಭಾರಿ ಮಳೆಯಾಗಲಿದೆ, ಜಾಗೃತೆಯಿಂದಿರಿ’ ಎಂದು ಪೋಸ್ಟ್‌ ಹಂಚಿಕೊಂಡಿದೆ. 

ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಅದರ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮುಂದಿನ ಎರಡು ಮೂರು ದಿನಗಳಲ್ಲಿ ನೈರುತ್ಯ ಮಾರುತಗಳು ನಿರ್ಗಮನವಾಗುತ್ತಿರುವ ಈ ವೇಳೆಯಲ್ಲಿ ಮಳೆಯಾಗುತ್ತಿರುವುದು ಉತ್ತಮವೇ ಆಗಿದೆ ಎಂದು ಐಎಂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.