ಚೆನ್ನೈ: ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ, ತಮಿಳುನಾಡಿನ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯವು ಅರ್ಧ ಭರ್ತಿಯಾಗಿದೆ.
ಬಿಳಿಗುಡ್ಲುಂವಿನಲ್ಲಿ ಒಳಹರಿವು ಶನಿವಾರ ಮಧ್ಯಾಹ್ನ 2.30ರ ವೇಳೆಗೆ 67 ಸಾವಿರ ಕ್ಯುಸೆಕ್‌ಗಳಷ್ಟಿತ್ತು. ಮಧ್ಯರಾತ್ರಿಯ ವೇಳೆಗೆ 75 ಸಾವಿರ ಕ್ಯುಸೆಕ್‌ಗೆ ಏರುವ ಸಾಧ್ಯತೆಯಿದೆ. ಧರ್ಮಪುರಿ ಜಿಲ್ಲೆಯಲ್ಲಿನ ಹೊಗೇನಕಲ್ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.
ಶನಿವಾರ ಮಧ್ಯಾಹ್ನ 2.30ಕ್ಕೆ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದಲ್ಲಿ ಶೇಖರಣಾ ಸಾಮರ್ಥ್ಯ 61.130 ಅಡಿಗಳಷ್ಟಿದ್ದು, ಜಲಾಶಯದ ಪೂರ್ಣ ಸಾಮರ್ಥ್ಯ 120 ಅಡಿ. ಸದ್ಯ, 25.674 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಹೊರ ಹರಿವು 1 ಸಾವಿರ ಕ್ಯುಸೆಕ್ ಇದೆ.
ಕರ್ನಾಟಕದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಸಾಕಷ್ಟು ನೀರು ಹೊರ ಬಿಡುತ್ತಿರುವ ಕಾರಣ ಮೆಟ್ಟೂರು ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.