ತಿರುವನಂತಪುರಂ:ಭಾರತೀಯ ಹವಾಮಾನ ಇಲಾಖೆಯು, ಕೇರಳದಲ್ಲಿ ಭಾನುವಾರದಿಂದ ಮುಂದಿನ ನಾಲ್ಕು ದಿನಗಳ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಹಾಗೆಯೇ,ಆಲಪ್ಪುಳ, ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ 'ಯೆಲ್ಲೊ' ಅಲರ್ಟ್ ಘೋಷಿಸಿದೆ.
ಎಲ್ಲೋ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ ಜನಜೀವನದ ಮೇಲೆ ಭಾರಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆಗಸ್ಟ್ 3 ಮೀನುಗಾರಿಕೆ ನಡೆಸದಂತೆ ಸೂಚಿಸಲಾಗಿದೆ.
ಏತನ್ಮಧ್ಯೆ, ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ ಸೋಮವಾರದ ಮಟ್ಟಿಗೆ 'ಆರೆಂಜ್' ಅಲರ್ಟ್ ಘೋಷಣೆಯಾಗಿದೆ.
ಈ ತಿಂಗಳು (ಜುಲೈ) ರಾಜ್ಯದಲ್ಲಿ ಭಾರಿ ಮಳೆ ಸುರಿದಿರುವುದರ ಹೊರತಾಗಿಯೂ, ಜೂನ್‌ನಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿದ್ದರಿಂದಶೇ 26 ರಷ್ಟು ಕಡಿಮೆ ಮಳೆಯಾಗಿದೆ.
ಮಳೆ ಕೊರತೆಯಾಗಿದ್ದರೂ ಜಲಾಶಯಗಳು ಶೇ 60 ರಷ್ಟು ತುಂಬಿವೆ. ಸೆಪ್ಟೆಂಬರ್ 30ಕ್ಕೆ ನೈರುತ್ಯ ಮಾನ್ಸೂನ್ ಮುಗಿಯುವ ವೇಳೆಗೆ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.