ADVERTISEMENT

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಪಾರಂಪರಿಕ ಕಂಚಿನ ಪಾತ್ರೆ ಕಳ್ಳತನ: ನಾಲ್ವರ ಬಂಧನ

ಪಿಟಿಐ
Published 20 ಅಕ್ಟೋಬರ್ 2024, 10:09 IST
Last Updated 20 ಅಕ್ಟೋಬರ್ 2024, 10:09 IST
<div class="paragraphs"><p>ಬಂಧನ</p></div>

ಬಂಧನ

   

ತಿರುವನಂತಪುರ: ಪ್ರಸಿದ್ಧ ಪದ್ಮನಾಭಸ್ವಾಮಿ ದೇವಸ್ಥಾನದಿಂದ ಕಂಚಿನ ಪಾತ್ರೆಯನ್ನು ಕದ್ದ ಆರೋಪದ ಮೇಲೆ ಹರಿಯಾಣದಲ್ಲಿ ನಾಲ್ವರನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಈ ಕಂಚಿನ ಪಾತ್ರೆಯನ್ನು ಸ್ಥಳೀಯವಾಗಿ ‘ಉರುಳಿ‘ ಎಂದು ಕರೆಯಲಾಗುತ್ತದೆ. ಈ ಪಾರಂಪರಿಕ ಪಾತ್ರೆಯನ್ನು ದೇವಾಲಯದಲ್ಲಿ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತದೆ.

ADVERTISEMENT

ಆರೋಪಿಗಳಲ್ಲಿ ಒಬ್ಬರು ಆಸ್ಟ್ರೇಲಿಯನ್ ಪೌರತ್ವ ಹೊಂದಿರುವ ವೈದ್ಯರಾಗಿದ್ದು, ಇವರ ಜೊತೆ ಮೂವರು ಮಹಿಳೆಯರು ಸೇರಿದ್ದಾರೆ. ಕಳೆದ ವಾರದಲ್ಲಿ ಇವರು ದೇವಾಲಯಕ್ಕೆ ಭೇಟಿ ನೀಡಿದ್ದರು. ಗುರುವಾರ ಪಾತ್ರೆಯನ್ನು ಕಳ್ಳತನ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಲಾಯಿತು. ಅವರು ಹರಿಯಾಣದಲ್ಲಿ ಇರುವುದು ಪತ್ತೆಯಾದ ಬಳಿಕ ಅಲ್ಲಿನ ಪೊಲೀಸರ ನೆರವಿನೊಂದಿಗೆ ಬಂಧಿಸಲಾಗಿದೆ. ಅವರನ್ನು ಕೇರಳಕ್ಕೆ ಕರೆತರಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.