ADVERTISEMENT

ಅಯೋಧ್ಯೆಯಲ್ಲಿ ರಾಮಾಯಣ ಆಧಾರಿತ ನೃತ್ಯ ಪ್ರದರ್ಶನ ನೀಡಲಿರುವ ನಟಿ ಹೇಮಾ ಮಾಲಿನಿ

ಡೆಕ್ಕನ್ ಹೆರಾಲ್ಡ್
Published 15 ಜನವರಿ 2024, 13:03 IST
Last Updated 15 ಜನವರಿ 2024, 13:03 IST
<div class="paragraphs"><p>ನಟಿ ಹೇಮಾ ಮಾಲಿನಿ</p></div>

ನಟಿ ಹೇಮಾ ಮಾಲಿನಿ

   

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಲಿದ್ದಾರೆ.

ವಿವಿಧ ಭಾಷೆಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಮಂದಿರ ಉದ್ಘಾಟನೆಗೂ ಮುನ್ನ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಜನವರಿ 17ರಂದು ರಾಮಾಯಣದ ಕಥೆ ಆಧರಿಸಿದ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ನಾನು ಮೊದಲ ಬಾರಿಗೆ ಅಯೋಧ್ಯೆಗೆ ಬರುತ್ತಿದ್ದೇನೆ. ದೇಶದ ಜನರು ಹಲವು ವರ್ಷಗಳಿಂದ ಕಾಯುತ್ತಿರುವ ಕ್ಷಣ ಇದಾಗಿದೆ. ‌ಜ.17ರಂದು ನಾನು ಅಯೋಧ್ಯಾಧಾಮದಲ್ಲಿ ರಾಮಾಯಣ ಆಧಾರಿತ ನೃತ್ಯ ನೃತ್ಯ ಪ್ರದರ್ಶನ ಮಾಡಲಿದ್ದೇನೆ' ಎಂದು ಅವರು ತಿಳಿಸಿದ್ದಾರೆ. ಈ ವಿಡಿಯೊವನ್ನು ‘ಎಎನ್‌ಐ' ಸುದ್ದಿಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ನಾಯಕರು, ಸಿನಿ, ಕ್ರಿಕೆಟ್‌ ತಾರೆಯರು ಸೇರಿದಂತೆ, ವಿದೇಶಗಳ ಗಣ್ಯರಿಗೂ ಆಹ್ವಾನ ನೀಡಲಾಗಿದೆ.

'ರಾಮಲಲ್ಲಾ'ನ ಪ್ರಾಣಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳು ಜನವರಿ 16ರಿಂದ ಪ್ರಾರಂಭವಾಗಲಿವೆ. ವಾರಣಾಸಿ ಮೂಲದ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಜನವರಿ 22ರಂದು ಪ್ರಮುಖ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.