ADVERTISEMENT

ಬಾಂಗ್ಲಾ ನುಸುಳುಕೋರರಿಗೆ ಸೊರೇನ್ ಸರ್ಕಾರದಿಂದ ರೆಡ್ ಕಾರ್ಪೆಟ್ ಸ್ವಾಗತ: ಅಮಿತ್ ಶಾ

ಪಿಟಿಐ
Published 9 ನವೆಂಬರ್ 2024, 12:23 IST
Last Updated 9 ನವೆಂಬರ್ 2024, 12:23 IST
ಅಮಿತ್ ಶಾ 
ಅಮಿತ್ ಶಾ    

ರಾಂಚಿ: ಬಾಂಗ್ಲಾ ನುಸುಳುಕೋರರಿಗೆ ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರ ರೆಡ್ ಕಾರ್ಪೆಟ್ ಸ್ವಾಗತ ಕೋರುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಪೂರ್ವ ಸಿಂಗ್‌ಭೂಮ್‌ನ ಪೊಟ್ಕಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬುಡಕಟ್ಟು ಜನಾಂಗದ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಎಂಎಂ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಆದರೆ ಬುಡಕಟ್ಟು ಜನಾಂಗದವರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೊರೇನ್‌ ಸರ್ಕಾರ ಬಾಂಗ್ಲಾದೇಶಿ ನುಸುಳುಕೋರರಿಗೆ ರೆಡ್ ಕಾರ್ಪೆಟ್ ಹಾಸಿದೆ. ಅವರು ಜಾರ್ಖಂಡ್‌ನಲ್ಲಿ ನೆಲೆಸಿ, ಬುಡಕಟ್ಟು ಜನಾಂಗದವರ ಭೂಮಿ, ಯುವಕರ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ. ಅಲ್ಲದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಅವರನ್ನು ಗಡಿಪಾರು ಮಾಡಲಾಗುವುದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.