ದಿಫು: ಅಸ್ಸಾಂನ ಕಾರ್ಬಿ ಅಂಗಲಾಂಗ್ ಜಿಲ್ಲೆಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹20 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಭಾರಿ ಮೊತ್ತದ ಹೆರಾಯಿನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಖಟ್‌ಖಟೀ ಪ್ರದೇಶದಲ್ಲಿ ಬ್ಯಾರಿಕೇಡ್ ಸ್ಥಾಪಿಸಿದ ಪೊಲೀಸರು ದಿಮಾಪುರ್‌ನಿಂದ ಬರುತ್ತಿದ್ದ ವಾಹನ ತಡೆದು ಶೋಧನೆ ನಡೆಸಿದಾಗ 390 ಸೋಪ್ ಬಾಕ್ಸ್‌ಗಳಲ್ಲಿ 5 ಕೆ.ಜಿ.ಗೂ ಹೆಚ್ಚು ಹೆರಾಯಿನ್ ಪತ್ತೆ ಹಚ್ಚಿದ್ದಾರೆ ಎಂದು ಬೊಕಜನ್ ಉಪವಿಭಾಗದ ಪೊಲೀಸ್ ಅಧಿಕಾರಿ ಜಾನ್ ದಾಸ್ ತಿಳಿಸಿದ್ದಾರೆ.
ದಿಮಾಪುರ್‌ನಲ್ಲಿ ವಾಹನದಲ್ಲಿ ತುಂಬಿದ ಹೆರಾಯಿನ್ ನಾಗಾವ್ ಬೈಪಾಸ್‌ಗೆ ತಲುಪಿಸುವ ಗುರಿ ಹೊಂದಲಾಗಿತ್ತು. ವಾಹನದ ಚಾಲಕನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.