ADVERTISEMENT

ತೂತ್ತುಕುಡಿಯಲ್ಲಿ ಭಾರಿ ಕಟ್ಟೆಚ್ಚರ

ಮತ್ತೆ ಪ್ರತಿಭಟನೆ ಸಾಧ್ಯತೆ– ಮುನ್ನೆಚ್ಚರಿಕೆ

ಪಿಟಿಐ
Published 17 ಡಿಸೆಂಬರ್ 2018, 19:25 IST
Last Updated 17 ಡಿಸೆಂಬರ್ 2018, 19:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೂತ್ತುಕುಡಿ (ತಮಿಳುನಾಡು): ವೇದಾಂತ ಕಂಪನಿಯ ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಒಪ್ಪಿಗೆ ನೀಡಿರುವುದರಿಂದ, ಕೆಲವು ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸುವ ಸಾಧ್ಯತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಘಟಕದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟಕವನ್ನು ಶಾಶ್ವ ತವಾಗಿ ಮುಚ್ಚಬೇಕೆಂದು ಆಗ್ರಹಿಸಿ ಈ ಹಿಂದೆ ಸ್ಥಳೀಯರು 99 ದಿನ ಪ್ರತಿ ಭಟನೆ ನಡೆ ಸಿದ್ದರು. ಮೇ 22 ಮತ್ತು 23ರಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿ ಬಾರ್‌ ನಿಂದ 13 ಮಂದಿ ಮೃತಪಟ್ಟಿದ್ದರು.‌

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ (ಚೆನ್ನೈ ವರದಿ): ಎನ್‌ಜಿಟಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಮಂಗಳವಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.