ADVERTISEMENT

Himachal Pradesh Rains: ಮೃತರ ಸಂಖ್ಯೆ 57ಕ್ಕೇರಿಕೆ– ಶಾಲಾ–ಕಾಲೇಜುಗಳಿಗೆ ರಜೆ

ಪಿಟಿಐ
Published 16 ಆಗಸ್ಟ್ 2023, 6:48 IST
Last Updated 16 ಆಗಸ್ಟ್ 2023, 6:48 IST
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ   ಪಿಟಿಐ ಚಿತ್ರ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

ಅವಶೇಷಗಳ ಅಡಿಯಿಂದ ಮಹಿಳೆಯೊಬ್ಬರ ಮೃತ ಹೊರೆತೆಗೆಯಲಾಗಿದೆ. ಅಲ್ಲಿಗೆ ಮೃತರಾದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರದಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿಮ್ಲಾದ ಸಮ್ಮರ್‌ ಹಿಲ್‌, ಕೃಷ್ಣ ನಗರ ಹಾಗೂ ಫಾಗಿಲ್‌ನಲ್ಲಿ ಭೂಕುಸಿತ ಉಂಟಾಗಿದೆ.

ADVERTISEMENT

ಸಮ್ಮರ್‌ ಹಿಲ್ ಹಾಗೂ ಕೃಷ್ಣ ನಗರ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಮ್ಮರ್‌ ಹಿಲ್‌ನಲ್ಲಿ ಒಂದು ದೇಹವನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆದಿತ್ಯ ನೇಗಿ ಮಾಹಿತಿ ನೀಡಿದ್ದಾರೆ.

ಈವರೆಗೆ ಸಮ್ಮರ್‌ ಹಿಲ್‌ನಲ್ಲಿ 13, ಫಾಗಿಲ್‌ನಲ್ಲಿ 5 ಹಾಗೂ ಕೃಷ್ಣ ನಗರದಲ್ಲಿ 2 ದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಕುಸಿದ ಶಿವ ದೇಗುಲದ ಅವಶೇಷಗಳ ಅಡಿಯಲ್ಲಿ ಇನ್ನೂ 10 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೃಷ್ಣ ನಗರದಲ್ಲಿ 15 ಮನೆಗಳನ್ನು ತೆರವು ಮಾಡಲಾಗಿದ್ದು, ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸತತ ಮಳೆಯಿಂದಾಗಿ ಭೂಕುಸಿತದ ಭಯದಿಂದ ಹಲವು ಮಂದಿ ತಾವಾಗಿಯೇ ಮನೆ ತೊರೆದಿದ್ದಾರೆ.

ಎಲ್ಲಾ ಶಾಲಾ– ಕಾಲೇಜುಗಳನ್ನು ಮುಚ್ಚುವಂತೆ ಹಿಮಾಚಲ ಪ್ರದೇಶ ಶಿಕ್ಷಣ ಇಲಾಖೆ ಆದೇಶಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಆಗಸ್ಟ್‌ 19ರ ವರೆಗೆ ಬೋಧನೆ ನಿಲ್ಲಿಸಲಾಗಿದೆ.

ಮಳೆಯಿಂದಾಗಿ ಸುಮಾರು 800 ರಸ್ತೆಗಳು ಬಂದ್‌ ಆಗಿದ್ದು, ಸುಮಾರು ₹2,700 ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.