ADVERTISEMENT

Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

ಪಿಟಿಐ
Published 14 ಸೆಪ್ಟೆಂಬರ್ 2024, 5:59 IST
Last Updated 14 ಸೆಪ್ಟೆಂಬರ್ 2024, 5:59 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ‘ಅಧಿಕೃತ ಭಾಷೆಯಾದ ಹಿಂದಿಯೂ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘ಹಿಂದಿ ದಿವಸ್’ ಪ್ರಯುಕ್ತ ದೇಶವಾಸಿಗಳಿಗೆ ಶುಭ ಕೋರಿರುವ ಅವರು, ‘ಎಲ್ಲಾ ಭಾರತೀಯ ಭಾಷೆಗಳು ದೇಶದ ಹೆಮ್ಮೆ ಮತ್ತು ಪರಂಪರೆಯಾಗಿದೆ. ಅವುಗಳನ್ನು ಶ್ರೀಮಂತಗೊಳಿಸದೆ ದೇಶವು ಮುಂದುವರಿಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಸಾರ್ವಜನಿಕ ಸಂವಹನ ಮತ್ತು ರಾಷ್ಟ್ರೀಯ ಏಕತೆಯನ್ನು ಸಾರುವ ಮೂಲಕ ದೇಶದ ಅಧಿಕೃತ ಭಾಷೆಯಾಗಿ ಹಿಂದಿಯೂ ಈ ವರ್ಷ 75 ವರ್ಷಗಳನ್ನು ಪೂರೈಸಿದೆ ಎಂದು ಶಾ ತಿಳಿಸಿದ್ದಾರೆ.

ADVERTISEMENT

‘ಎಲ್ಲಾ ಭಾರತೀಯ ಭಾಷೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವ ಮೂಲಕ ಹಿಂದಿ ಭಾಷೆಯು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವನ್ನು ಸಾಕಾರಗೊಳಿಸಲು ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ವಿವರಿಸಿದ್ದಾರೆ.

ದೇಶದ ಪ್ರಮುಖ ಭಾಷೆಯಾಗಿರುವ ಹಾಗೂ ಭಾರತ ಸರ್ಕಾರದ ಆಡಳಿತ ಭಾಷೆ ಎಂದು ಗುರುತಿಸಲ್ಪಟ್ಟಿರುವ ಹಿಂದಿ ಭಾಷೆಯನ್ನು ಗೌರವಿಸಲು, ಜಾಗೃತಿ ಮೂಡಿಸಲು ಇಂದು (ಸೆ.14) ದೇಶದಾದ್ಯಂತ 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿದೆ.

‘ಹಿಂದಿ ದಿವಸ್‘ ಪ್ರಯುಕ್ತ ದೇಶದಲ್ಲಿ ಇಂದು ಕೇಂದ್ರ ಸರ್ಕಾರ ಹಾಗೂ ಅನೇಕ ಹಿಂದಿ ಭಾಷೆಯ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಸೆಪ್ಟೆಂಬರ್ ತಿಂಗಳನ್ನು ಹಿಂದಿ ಮಾಸಾಚರಣೆ ಎಂದು ಕೂಡ ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.