ADVERTISEMENT

ಕೊಲ್ಕತ್ತಾ ಹೈಕೋರ್ಟ್‍ಗೆ ಖುದ್ದಾಗಿ ಹಾಜರಾಗುವಂತೆ ಶಶಿ ತರೂರ್‌ಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 6:40 IST
Last Updated 14 ಜುಲೈ 2018, 6:40 IST
ಶಶಿ ತರೂರ್
ಶಶಿ ತರೂರ್   

ಕೊಲ್ಕತ್ತಾ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪುನರಾವರ್ತನೆಯಾದರೆ ಭಾರತ,ಹಿಂದೂ ಪಾಕಿಸ್ತಾನಆಗಲಿದೆ ಎಂದು ಹೇಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್‌ಗೆ ಕೊಲ್ಕತ್ತಾ ಹೈಕೋರ್ಟ್ ಖುದ್ದಾಗಿ ಹಾಜರಾಗುವಂತೆ ಆದೇಶಿಸಿದೆ.ಈ ಹೇಳಿಕೆ ಮೂಲಕ ಶಶಿ ತರೂರ್ ಅವರುದೇಶವನ್ನುಅವಮಾನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು 14ರಂದು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಕಳಿಸಿದೆ.

ವರದಿಗಳ ಪ್ರಕಾರ, ಭಾರತೀಯ ದಂಡ ಸಂಹಿತೆ ಸೆಕ್ಷನ್ 153A/295A ಮತ್ತು ಸೆಕ್ಷನ್ 3,ದೇಶವನ್ನು ಅನಮಾನಿಸಿದ ವಿರುದ್ಧ ಕಾಯ್ದೆ 1971 ಪ್ರಕಾರ ಕೊಲ್ಕತ್ತಾ ಮೂಲದ ವಕೀಲ ಸಮೀತ್ ಚೌಧರಿ ತರೂರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ್ದ ತರೂರ್‌, ಹಿಂದೂ ಪಾಕಿಸ್ತಾನ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು .ಆ ಹೇಳಿಕೆ ಬಗ್ಗೆ ಆಕ್ಷೇಪವೆದ್ದಿದ್ದರೂ ಶಶಿ ತರೂರ್ ಕ್ಷಮೆ ಕೇಳಲಿಲ್ಲ. ಅವರ ಈ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಸಂವಿಧಾನವನ್ನು ಅವಮಾನಿಸಿದೆ ಎಂದು ವಕೀಲರು ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.