ಪುಣೆ (ಮಹಾರಾಷ್ಟ್ರ):ಹಿಂದುತ್ವ ಹಾಗೂ ಹಿಂದೂ ಧರ್ಮದ ಹೆಸರು ಹೇಳುವ ರಾಜಕಾರಣಿಗಳು ಇದರಿಂದರಾಜಕೀಯ ಲಾಭ ಮಾಡಿಕೊಳ್ಳುತ್ತಾರೆಯೇ ವಿನಃ ಇಂತಹವರಿಂದ ಹಿಂದೂ ಧರ್ಮಕ್ಕೆ ಯಾವುದೇ ಉಪಯೋಗವಿಲ್ಲ ಎಂದುಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿದ್ದಾರೆ.
ಭಾನುವಾರ ಇಲ್ಲಿ ನಡೆದಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ.ಕೆಲವರು ಅವರ ರಾಜಕೀಯ ಸಿದ್ದಾಂತಗಳಿಗಾಗಿ ಹಿಂದೂ ಧರ್ಮದ ಹೆಸರನ್ನುಬಳಸಿಕೊಳ್ಳುವುದನ್ನು ಹೊರತುಪಡಿಸಿದರೆ, ಬೇರೆ ಯಾವ ಉದ್ದೇಶವೂ ಇಲ್ಲಿ ಇಲ್ಲ, ಇಂತಹವರ ಕುರಿತು ಜನರಿಗೆ ಅರ್ಥ ಮಾಡಿಸುವುದಕ್ಕಾಗಿಯೇ ನಾನು'WHY I AM HINDU' ಎನ್ನುವ ಪುಸ್ತಕ ಬರೆದಿದ್ದೇನೆ. ಆ ಮೂಲಕ ಜನರನ್ನು ಜಾಗೃತರನ್ನಾಗಿ ಮಾಡುತ್ತೇನೆ ಎಂದಿದ್ದಾರೆ.
ದೇವರು ಹಾಗೂ ಧರ್ಮದ ಹೆಸರಿನಲ್ಲಿ ಹಿಂಸಾಚಾರ ಸಲ್ಲದು. ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಹಿಡಿದುಕೊಂಡಗುಂಪು ಜೈಶ್ರೀ ರಾಮ್ ಎಂದು ಹೇಳುವಂತೆ ಅವರನ್ನು ಬಲವಂತಪಡಿಸಿದೆ. ಈ ರೀತಿ ಹಿಂಸಿಸುವುದು, ಕೊಲ್ಲುವುದು ಹಿಂದೂ ಧರ್ಮಕ್ಕೆ ಹಾಗೂ ಶ್ರೀರಾಮ ದೇವರಿಗೆ ಮಾಡಿದ ಅಪಮಾನ ಎಂದಿದ್ದಾರೆ.
ಭಾರತದಲ್ಲಿ ಸ್ವಾತಂತ್ರ್ಯಹಾಗೂ ಸಂವಿಧಾನದೃಷ್ಟಿಯಲ್ಲಿ ಎಲ್ಲರೂ ಸಮಾನರೆ, ಎಲ್ಲರೂ ಸೇರಿಯೇ ಭಾರತ, ಇಲ್ಲಿ ಯಾವುದೇ ಧರ್ಮ, ಭಾಷೆ, ಬಣ್ಣ, ಜನಾಂಗದ ಭೇದ ಮಾಡುವಂತಿಲ್ಲ. ವಿವಿಧ ಘಟನೆಗಳಲ್ಲಿ ಉದ್ರೇಕಗೊಂಡ ಗುಂಪು ಹಲವರನ್ನು ಕೊಲೆ ಮಾಡಿದ ಕುರಿತು ಮಾತನಾಡಿದ ತರೂರ್, ಗೋಮಾಂಸದ ಹೆಸರಿನಲ್ಲಿ ಹಲವರನ್ನು ಕೊಲೆ ಮಾಡಲಾಗಿದೆ. ಕೊಲ್ಲುವ ಹಕ್ಕನ್ನು ಇವರಿಗೆ ಕೊಟ್ಟವರಾರು ಎಂದು ಪ್ರಶ್ನಿಸಿದರು.
15 ವರ್ಷದ ಬಾಲಕನಿಗೆ ರೈಲಿನಲ್ಲಿ ಇರಿದು ಕೊಲೆ ಮಾಡಲಾಯಿತು. ಇದನ್ನು ಹಿಂದು ಧರ್ಮ ಹೇಳಿದೆಯೇ, ನಾನು ಹಿಂದುವೇ ಆದರೆ, ಈ ರೀತಿಯ ವ್ಯಕ್ತಿಯಲ್ಲ ಎಂದು ಶಶಿತರೂರ್ ಹೇಳಿದರು.
ನಾವು ಅಲ್ಪಸಂಖ್ಯಾತರಿಗೆ ಮಾತ್ರ ಕೆಲಸ ಮಾಡಬೇಕು ಎಂದಿಲ್ಲ. ಯಾವಾಗಲೂ ಸಮಾಜದಲ್ಲಿ ದುರ್ಬಲ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಸಹಾಯ ಮಾಡಬೇಕು ಅದು ನಮ್ಮ ಕರ್ತವ್ಯವಾಗಿದೆ ಎಂದು ಮಹಾತ್ಮಗಾಂಧಿ ಅವರು ಹೇಳಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.