ADVERTISEMENT

ಖ್ಯಾತ ಗಾಯಕ ಪಂಕಜ್‌ ಉಧಾಸ್ ನಿಧನಕ್ಕೆ ಪ್ರಧಾನಿ ಮೋದಿ, ಖರ್ಗೆ ಸಂತಾಪ

ಪಿಟಿಐ
Published 26 ಫೆಬ್ರುವರಿ 2024, 13:19 IST
Last Updated 26 ಫೆಬ್ರುವರಿ 2024, 13:19 IST
<div class="paragraphs"><p>ದಿವಂಗತ ಗಾಯಕ ಪಂಕಜ್ ಉಧಾಸ್ ಅವರ ಜೊತೆ ಪ್ರಧಾನಿ ಮೋದಿ</p></div>

ದಿವಂಗತ ಗಾಯಕ ಪಂಕಜ್ ಉಧಾಸ್ ಅವರ ಜೊತೆ ಪ್ರಧಾನಿ ಮೋದಿ

   

X/@narendramodi

ನವದೆಹಲಿ: ಪದ್ಮಶ್ರೀ ಪುರಸ್ಕೃತ ಖ್ಯಾತ ಘಜಲ್ ಗಾಯಕ ಪಂಕಜ್ ಉಧಾಸ್ ನಿಧನಕ್ಕೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ADVERTISEMENT

‘ಪಂಕಜ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ತಮ್ಮ ಸ್ವರದ ಮೂಲಕ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಅವರಿಗಿತ್ತು. ಅವರ ಘಜಲ್‌ಗಳು ನಮ್ಮ ಅಂತರಾಳಕ್ಕೆ ಮುಟ್ಟುತ್ತಿದ್ದವು’ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪಂಕಜ್‌ ಅವರೊಂದಿಗೆ ನಡೆಸಿದ ಸಂವಾದಗಳು ನನ್ನ ನೆನಪಿನಂಗಳದಿಂದ ಮಾಸಿಲ್ಲ. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದರು.

‘ತಮ್ಮ ಸುಮಧುರ ಕಂಠದಿಂದ ಲಕ್ಷಾಂತರ ಕೇಳುಗರ ಹೃದಯವನ್ನು ಪಂಕಜ್ ಉಧಾಸ್ ಅವರು ಗೆದ್ದುಕೊಂಡಿದ್ದರು. ತಮ್ಮ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.